– ನಂದಿ ಬೆಟ್ಟದಲ್ಲಿರುವ ಮಂಗಳಿಗೆ ಬಾಳೆಹಣ್ಣು ನೀಡಿದ ನಟ
ಬೆಂಗಳೂರು: ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು ಎಂದು ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಅವರು ಹೇಳಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ದೇಶ ಲಾಕ್‍ಡೌನ್ ಆಗಿದೆ. ಜನರಿಗೆ ಊಟ ಸಿಗದೆ ಪರಾದಾಡುತ್ತಿದ್ದಾರೆ. ಇನ್ನೂ ಈ ದಿನಗಳಲ್ಲಿ ಪ್ರಾಣಿ ಪಕ್ಷಿಗಳ ಕಷ್ಟವಂತು ಹೇಳತೀರದು. ಹಾಗಾಗಿ ಹಲವಾರು ಈ ಲಾಕ್‍ಡೌನ್ ಸಮಯದಲ್ಲಿ ಪ್ರಾಣಿ ಪಕ್ಷಿಗಳ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಅಂತಯೇ ನಟ ಚಂದನ್ ಅವರು ಕೂಡ ನಂದಿ ಬೆಟ್ಟಕ್ಕೆ ತೆರಳಿ ಅಲ್ಲಿನ ಕೋತಿಗಳಿಗೆ ಬಾಳೆಹಣ್ಣು ನೀಡಿ ಬಂದಿದ್ದಾರೆ.
Advertisement
https://www.instagram.com/p/B-cJpFwAw91/
Advertisement
ಈ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಚಂದನ್, ಪಾಠವನ್ನು ಕಲಿತೆ. ಸಾಮಾಜಿಕ ಅಂತರ ಎಂಬುದನ್ನು ನಾವು ಯಾವಾಗ ಕಲಿಯುತ್ತೆವೆ ಎಂದರೆ, 500 ಮಂಗಗಳಿಗೆ ಆಹಾರ ನೀಡುವುದು ಗುಂಪು ಸೇರುವುದಕ್ಕಿಂತ ಒಳ್ಳೆಯದು ಎಂದು ನಮಗೆ ಅರ್ಥವಾದಾಗ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಕೋತಿಗೆ ಬಾಳೆಹಣ್ಣು ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
Advertisement
https://www.instagram.com/p/B-CN2ddgZeM/
Advertisement
ನಂದಿ ಬೆಟ್ಟದಲ್ಲಿ ಸಾಕಷ್ಟು ಮಂಗಗಳು ಇದ್ದಾವೆ. ಇವುಗಳು ಅಲ್ಲಿಗೆ ಬರುವ ಪ್ರವಾಸಿಗರು ನೀಡುವ ಆಹಾರವನ್ನು ನಂಬಿ ಮತ್ತು ಅಲ್ಲಿನ ಅಂಗಡಿಗಳನ್ನು ನಂಬಿ ಬದುಕುತ್ತಿದ್ದವು. ಈಗ ದೇಶವೇ ಲಾಕ್‍ಡೌನ್ ಆಗಿದೆ. ಜೊತೆಗೆ ನಂದಿ ಬೆಟ್ಟದ ಬಾಗಿಲು ಮುಚ್ಚಿದೆ. ಅಲ್ಲಿಗೆ ಯಾವುದೇ ಪ್ರವಾಸಿಗರು ಹೋಗುತ್ತಿಲ್ಲ. ಅಂಗಡಿಗಳು ತೆರೆಯುತ್ತಿಲ್ಲ. ಆದ್ದರಿಂದ ಅಲ್ಲಿರುವ ಸಾವಿರಾರು ಮಂಗಗಳು ಹಸಿವಿನಿಂದ ಬಳಲುತ್ತಿವೆ. ಇದನ್ನು ಅರಿತ ಚಂದನ್ ಅಲ್ಲಿಗೆ ಹೋಗಿ ಅವುಗಳಿಗೆ ಆಹಾರ ನೀಡಿದ್ದಾರೆ.
https://www.instagram.com/p/B9WlVsagIVt/
ಸಾಕಷ್ಟು ಸಿನಿಮಾ ನಟ-ನಟಿಯರು ಕೂಡ ತಮ್ಮ ಮನೆ ಅಕ್ಕಪಕ್ಕ ನಾಯಿಗಳು ಮತ್ತು ಬೀದಿನಾಯಿಗಳಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಐಂದ್ರಿಂತಾ ರೇ ಅವರು ತಮ್ಮ ಮನೆಯ ಅಕ್ಕಪಕ್ಕದ ಬೀದಿನಾಯಿಗಳಿಗೆ ಊಟ ನೀಡಿದ್ದರು. ಈ ಹಿಂದೆ ಸಂಯುಕ್ತ ಹೊರನಾಡು ಅವರು ಕೂಡ ತಮ್ಮ ಸ್ನೇಹಿತ ಬಳಗವನ್ನು ಕಟ್ಟಿಕೊಂಡು ಬೆಂಗಳೂರಿನ ಹಲವಡೆ ಬೀದಿನಾಯಿಗಳಿಗೆ ಆಹಾರ ನೀಡಿದ್ದರು.