Connect with us

Bengaluru City

‘ಸುಳ್ಳುಗಾರ’, ‘ಅವಿವೇಕಿ’ ಮುಖ್ಯಮಂತ್ರಿ- ಎಚ್‌ಡಿಕೆ ವಿರುದ್ಧ ಸಿಡಿದೆದ್ದ ರೈತರು

Published

on

–   ತಾಕತ್ತಿದ್ದರೆ ಸಿಎಂ ಗೋಲಿಬಾರ್ ಮಾಡಿಸಲಿ

ಬೆಂಗಳೂರು: ಕಬ್ಬು ಬಾಕಿ ಪಾವತಿ, ಸೂಕ್ತ ಬೆಂಬಲ ಬೆಲೆ ನಿಗದಿಗಾಗಿ ಹೋರಾಡ್ತಿರೋ ರೈತರು ಇಂದು ಬೆಂಗಳೂರಿಗೆ ಬಂದಿಳಿದಿದ್ದು, ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ಗೂಂಡಾಗಳು, ದರೋಡೆ ಹೇಳಿಕೆ ವಿರುದ್ಧ ಸಿಡಿದೆದ್ದಿದ್ದಾರೆ.

ವಿಧಾನಸೌಧ ಚಲೋಗಾಗಿ ಬೆಂಗಳೂರಿಗೆ ಬಂದ ಅನ್ನದಾತರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಖ್ಯಮಂತ್ರಿಗಳು ಉದ್ಧಟತನದಿಂದ ಮಾತನಾಡಿದ್ದಾರೆ. ಇದರಿಂದ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇವರು ನಾಚಿಗೆಟ್ಟ, ವಚನಭ್ರಷ್ಟ ಹಾಗೂ ನೀಚಗೆಟ್ಟ ಮುಖ್ಯಮಂತ್ರಿ. ಭಾರತದ ಇತಿಹಾಸದಲ್ಲೇ ಕರ್ನಾಟಕ್ಕೆ ಇಂತಹ ಮುಖ್ಯಮಂತ್ರಿ ಬಂದಿರಲಿಲ್ಲ. ಯಾಕಂದ್ರೆ ಇವನು ನಿನ್ನೆ ಆಡಿದ ಮಾತು ಇವತ್ತಿಲ್ಲ. ಇವತ್ತು ಆಡದ ಮಾತು ನಾಳೆಗಿಲ್ಲ. ನಾನು ಸೋಮವಾರ ಬೆಳಗಾವಿಯಲ್ಲಿ ಸಭೆ ಕರೀತಿನಿ ಅಂತ ಹೇಳಿದ್ದಾನೆ. ಆದ್ರೆ ಈ ಅವಿವೇಕಿ ಮುಖ್ಯಮಂತ್ರಿ ಇವತ್ತು ಆಗಲ್ಲ ಮಂಗಳವಾರ ಬರುತ್ತೇನೆ ಅಂತ ಹೇಳುತ್ತಿದ್ದಾನೆ. ಸಾಲ ಕೊಡಬೇಕಾದದ್ದು ಇವರೋ ಅಥವಾ ಕಾರ್ಖಾನೆಗಳೋ ಅಂತ ಸಿಎಂ ಅವರನ್ನು ಏಕವಚನದಲ್ಲಿ ಸಂಭೋದಿಸುವ ಮೂಲಕ ಪ್ರಶ್ನಿಸಿದ್ದಾರೆ.

ಮತ್ತೊಬ್ಬರು ರೈತ ಮಾತನಾಡಿ, ಮುಖ್ಯಮಂತ್ರಿಯವರು 4 ವರ್ಷದಿಂದ ಎಲ್ಲಿ ಮಲಗಿದ್ದಿಯಾಮ್ಮ ಅಂತ ಕೇಳಿದ್ದಾರಲ್ಲ, ಇದೇ ಮಾತನ್ನು ರೈತರು ಅವರಿಗೆ ಕೇಳಿದ್ರೆ ಅವರಿಗೆ ಏನ್ ಅನಿಸತ್ತೆ?. ಇವನೊಬ್ಬ ಲಜ್ಜೆಗೆಟ್ಟ ಮುಖ್ಯಮಂತ್ರಿಯಾಗಿದ್ದಾನೆ. ನಂಬರ್ ಒನ್ ಸುಳ್ಳುಗಾರ. ಮಣ್ಣಿನ ಮಕ್ಕಳೆಂದೇ ಖ್ಯಾತರಾಗಿದ್ದ ಈ ಅಪ್ಪ-ಮಕ್ಕಳಿಗೆ ಇಂದು ಅದ್ಯಾವುದಿಲ್ಲ. ಅವರ ಅಣ್ಣ ಹೇಳ್ತಾರೆ ದುಡ್ಡನ್ನು ಪ್ರಿಂಟ್ ಮಾಡಕ್ಕಾಗುತ್ತಾ ಅಂತ. ಹಾಗಾದ್ರೆ ನಿಮಗೆ ರಾಮನಗರ ಖರೀದಿ ಮಾಡುವಾಗ ನಿಮ್ಮ ಬಳಿ ಹಣವಿತ್ತಾ? ಇವರಿಗೆ ಸಾಲಮನ್ನಾ ಮಾಡಲು ಆಗಲ್ಲ. ರೈತರ ಪರ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತಾಕತ್ತಿದ್ದರೆ ಗೋಲಿಬಾರ್ ಮಾಡಿಸಲಿ ಅಂತ ಸವಾಲೆಸೆದ್ರು.

ವಿವಿಧ ಜಿಲ್ಲೆಗಳಿಂದ ರೈತರು ಸಿಲಿಕಾನ್ ಗೆ ಆಗಮಿಸಿದ್ದು, ಸರ್ಕಾರದ ವಿರುದ್ಧ ಬೆಂಗಳೂರು ಚಲೋ ಆರಂಬಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳ ಹೇಳಿಕೆಯ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *