ಬೆಂಗಳೂರು: ಸಿಸಿಟಿವಿ ವೈಯರ್ ಕಟ್ ಮಾಡಿ ಲಕ್ಷಾಂತರ ರೂಪಾಯಿ ಹಣ ದೋಚಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಸಿಟಿ ಮಾರ್ಕೆಟ್ ನಲ್ಲಿ ನಡೆದಿದೆ.
ಕಳೆದ ಶುಕ್ರವಾರ ರಾತ್ರಿ ಹೆಲ್ಮೆಟ್ ಹಾಕಿಕೊಂಡು ಇಲ್ಲಿನ ಆಡಿಟರ್ ಕಚೇರಿಗೆ ಎಂಟ್ರಿಯಾದ ಇಬ್ಬರು ಕಳ್ಳರು, ಇಡೀ ಕಚೇರಿ ತುಂಬೆಲ್ಲ ಓಡಾಡಿದರು. ನಂತರ ಎಲ್ಲೆಲ್ಲಿ ಸಿಸಿಟಿವಿ ಇದೆ ಅನ್ನೋದು ಪರಿಶೀಲನೆ ನಡೆಸಿ, ಎಲ್ಲಾ ಕಡೆ ಸಿಸಿಟಿವಿ ವೈಯರ್ ಕಟ್ ಮಾಡಿದ್ದಾರೆ.
Advertisement
Advertisement
ವೈಯರ್ ಕಟ್ ಮಾಡಿದ ನಂತರ ಆಡಿಟರ್ ಆಫೀಸ್ ನಲ್ಲಿದ್ದ 13 ಲಕ್ಷ ನಗದು, ಎರಡು ಲ್ಯಾಪ್ ಟ್ಯಾಪ್ ಮೊಬೈಲ್ಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಸಿಸಿಟಿವಿ ವೈಯರ್ ಕಟ್ ಮಾಡುವ ಮುನ್ನ ಕಳ್ಳರ ಕೈಚಳ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ, ಆಡಿಟರ್ ಆಫೀಸ್ ನಲ್ಲಿ ಕಳ್ಳತನವಾಗಿ ನಾಲ್ಕು ದಿನ ಕಳೆದರೂ ಮಾಲೀಕರು ಮಾತ್ರ ಪೊಲೀಸರಿಗೆ ದೂರು ನೀಡಿಲ್ಲ. ಮಾಲೀಕರ ಈ ನಡೆ ಹಲವು ಅನುಮಾನ ಮೂಡುವಂತೆ ಮಾಡಿದೆ.