ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಮತ್ತು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಬಹುದೊಡ್ಡ ಸುಳಿವು ಸಿಕ್ಕಿದೆ. ಅಂತರಾಷ್ಟ್ರೀಯ ಬುಕ್ಕಿ ಜತಿನ್ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಹಲವಾರು ಮ್ಯಾಚ್‍ಗಳನ್ನು ಆರೋಪಿ ಬುಕ್ ಮಾಡಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಸಾಕ್ಷಿ ಸಿಕ್ಕಿತ್ತು. ಬಂಧನ ಭಯದಿಂದ ಆರೋಪಿ ದುಬೈ ಸೇರಿಕೊಂಡಿದ್ದ. ಆರೋಪಿ ಪತ್ತೆಗಾಗಿ ಎಲ್‍ಒಸಿ (Look out circular) ಹೊರಡಿಸಲಾಗಿತ್ತು. ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದ ಜತಿನ್ ಏರ್ ಪೋರ್ಟಿಗೆ ಬಂದಾಗ, ಸಿಸಿಬಿ ಪೊಲೀಸ್ರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈತ ಭವೇಶ್ ಭಾಪ್ನಾ ಜೊತೆ ಸೇರಿ ಸಾಕಷ್ಟು ಮ್ಯಾಚ್‍ಗಳನ್ನು ಬುಕ್ ಮಾಡಿರೊ ಬಗ್ಗೆ ಸಿಸಿಬಿ ಪೊಲೀಸರು ಸಾಕ್ಷಿ ಸಂಗ್ರಹ ಮಾಡಿದ್ದಾರೆ. ಬೇಲ್ ಸಿಕ್ಕಿರುವ ಹಿನ್ನೆಲೆ ಆರೋಪಿಯನ್ನು ವಿಚಾರಣೆ ನಡೆಸಿ ಬಿಟ್ಟು ಕಳಿಸಲಾಗುತ್ತೆ. ಅಗತ್ಯ ಬಿದ್ದರೆ ನೋಟಿಸ್ ನೀಡಿ ಮತ್ತೆ ಕರೆಸಲಾಗುತ್ತೆ ಎಂದು ಸಹ ಪೊಲೀಸ್ರು ಹೇಳಿದ್ದು, ಆರೋಪಿಯ ಹೇಳಿಕೆಯ ಆಧಾರದ ಮೇಲೆ ಬೆಟ್ಟಿಂಗ್ ಕೇಸ್ ಒಂದು ಹಂತ ತಲುಪೋದು ಗ್ಯಾರೆಂಟಿಯಾಗಿದೆ.