ಬೆಂಗಳೂರು: ಬೀಡು ಬಿಟ್ಟಿದ್ದ ಜಿಹಾದಿ ಗ್ಯಾಂಗ್ ಪ್ರಮುಖ ಆರೋಪಿ ಮೆಹಬೂಬ್ ಪಾಷಾನನ್ನ ಸಿಸಿಬಿ ಅಧಿಕಾರಿಗಳು ಈಗಾಗಲೇ ಖೆಡ್ಡಾಕ್ಕೆ ಕೆಡವಿದ್ದಾರೆ. ಆದರೆ ಈತ ತನಿಖೆ ವೇಳೆ ಕೆಲ ರೋಚಕ ಮಾಹಿತಿಗಳನ್ನ ಹೊರಹಾಕ್ತಿದ್ದಾನೆ.
ಈತ ರಾಜ್ಯದಲ್ಲಿ, ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ರೆಡಿಯಾಗಿದ್ದ. ಈತ ಆರು ತಿಂಗಳಲ್ಲಿ ವಿಧ್ವಂಸಕ ಕೃತ್ಯವೆಸಗಲು ಎಲ್ಲಾ ರೀತಿಯ ವಸ್ತುಗಳ ತಯಾರಿ ಮಾಡಿರುವ ವಿಚಾರ ಬಾಯಿಬಿಟ್ಟಿದ್ದಾನೆ.
ಅಲ್ಪಸಂಖ್ಯಾತ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೆ ತಜ್ಞರನ್ನ ಗುರುತಿಸಿ ಜಿಹಾದಿಗೆ ಸೇರಿಸಿ ಯಾವ ರೀತಿ ಸಿಲಿಕಾನ್ ಸಿಟಿಯನ್ನ ಉಡೀಸ್ ಮಾಡಬೇಕೆಂಬ ಟ್ರೈನಿಂಗ್ ನೀಡ್ತಿದ್ದ. ಹೀಗಾಗಿ ಸಿಸಿಬಿ ಪೊಲೀಸರು ಮುಂದೆ ನಡೆಯುವ ಭಾರೀ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಸದ್ಯ ಈತನ ಜೊತೆ ಟ್ರೈನಿಂಗ್ ಆಗಿರುವ ಜಿಹಾದಿಗಳಿಗೆ ಹುಡುಕಾಟ ನಡೆಸಿದ್ದಾರೆ.
ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ವಾಸವಾಗಿದ್ದ ಮೆಹಾಬೂಬ್ ಪಾಷಾ ಬೆಂಗಳೂರು ಜಿಹಾದಿ ಗ್ಯಾಂಗಿನ ಕಮಾಂಡರ್ ಆಗಿದ್ದನು. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಿಹಾದಿ ಗ್ಯಾಂಗ್ ಸೃಷ್ಟಿ ಮಾಡಲು ಸದಸ್ಯರ ನೇಮಕ, ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿ ಬೆಂಗಳೂರು ಹೊರವಲಯ, ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ಟ್ರೈನಿಂಗ್ ಮಾಡ್ತಿದ್ದ. ಇಷ್ಟು ಮಾತ್ರವಲ್ಲದೇ ಬನ್ನೇರುಘಟ್ಟ ರಸ್ತೆಯಲ್ಲಿ ಅಲ್ ಹಿಂದ್ ಟ್ರಸ್ಟ್ ಸ್ಥಾಪಿಸಿ ಜಿಹಾದಿ ಸಂಘಟನೆಗೆ ಮುಂದಾಗಿದ್ದ.
ಸದ್ಯ ಸಿಸಿಬಿ ವಶದಲ್ಲಿದ್ದು ಬಹಳಷ್ಟು ಪ್ರಮುಖ ಮಾಹಿತಿಯನ್ನ ತನಿಖಾಧಿಕಾರಿಗಳ ಎದುರು ಬಾಯಿಬಿಟ್ಟಿದ್ದಾರೆ.