ಬೆಂಗಳೂರು: ಕೆಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಅಂತರಾಷ್ಟ್ರೀಯ ಬುಕ್ಕಿ ಜೀತಿನ್‍ನ ಅಂಕಲ್ ವಿರುದ್ಧ ಸಿಸಿಬಿಯಲ್ಲಿ ಕೇಸ್ ದಾಖಲಾಗಿದೆ.
ತಮಿಳುನಾಡು ಮೂಲದ ಅಂಕಲ್ ತನಿಖೆಗೆ ಹಾಜರಾಗುವುದಕ್ಕೂ ಮುನ್ನ ದಿನ ಬುಕ್ಕಿ ಜೀತಿನ್ ಗೆ ಹೊಸದೊಂದು ಫೋನ್ ಕೊಡಿಸಿ ಕಳುಹಿಸಿದ್ದಾರೆ. ಆರೋಪಿ ಜೀತಿನ್‍ಗೆ ಆತನ ಅಂಕಲ್ ಹೊಸ ಫೋನ್ ಕೊಡಿಸಿ ಕಳುಹಿಸಿದ್ದರ ಹಿಂದೆ ಸಿಸಿಬಿ ಪೊಲೀಸರ ತನಿಖೆಯ ಜಾಡು ತಪ್ಪಿಸುವ ಉದ್ದೇಶ ಅಡಗಿತ್ತೆಂದು ತನಿಖಾಧಿರಿಗಳ ತನಿಖೆಯ ವೇಳೆ ಸತ್ಯ ಬಹಿರಂಗವಾಗಿದೆ.
ಆರೋಪಿ ಜೀತಿನ್ ಹಳೆಯ ಫೋನಿನಲ್ಲಿ ಬುಕ್ಕಿ ಮಾಡಿದ್ದ ಫಿಕ್ಸಿಂಗ್ ಪ್ರಕರಣದ ಡೇಟಾಗಳಿದ್ದವು. ಆರೋಪಿ ಜೀತಿನ್ ಫೋನ್ ನಲ್ಲಿರುವ ಡೇಟಾ ಎಲ್ಲವೂ ತನಿಖಾಧಿಕಾರಿಗಳ ಕೈಗೆ ಸಿಕ್ಕರೆ ಜೀತಿನ್ ಮತ್ತಷ್ಟು ಸಂಕಷ್ಟ ಸಿಲುಕುತ್ತಾನೆಂದು ಹೊಸದೊಂದು ಫೋನ್ ಖರೀದಿಸಿ ಆರೋಪಿಗೆ ಕೊಟ್ಟು ಕಳುಹಿಸಿದ್ದಾನೆ. ಸೋಮವಾರ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಸಿಸಿಬಿ ಡಿಸಿಪಿ ಕುಲದೀಪ್ ಜೈನ್ ನೇತೃತ್ವದಲ್ಲಿ ಕಮಿಷನರ್ ಕಚೇರಿಯಲ್ಲಿ ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಆರೋಪಿ ಜೀತಿನ್ ಮತ್ತೊಂದು ಮುಖವಾಡ ಬಯಲಾಗಿದೆ.
ತನಿಖಾಧಿಕಾರಿಗಳ ತಂಡ ತನಿಖೆಯ ವೇಳೆ ಆರೋಪಿಯಿಂದ ಫೋನ್ ಪಡೆದು ನೋಡಿದಾಗ ಯಾವುದೇ ಡೇಟಾಗಳು ಇರದೇ ಇರೋದನ್ನು ಕಂಡ ತನಿಖಾಧಿಕಾರಿಗಳು ಕೇರಳಿ ಕೆಂಡವಾಗಿದ್ದಾರೆ. ಯಾವಾಗ ತನಿಖಾಧಿಕಾರಿಗಳು ಜೀತಿನ್ ಮೇಲೆ ಮುಗಿಬಿದ್ದರೋ ಆಗ ಹೊಸ ಫೋನ್ ಅಸಲಿ ಸತ್ಯ ಬಿಚ್ಚಿಟ್ಟಿದ್ದಾನೆ. ಇದನ್ನೂ ಓದಿ:ಕೆಪಿಎಲ್ ಬೆಟ್ಟಿಂಗ್ ಪ್ರಕರಣ – ಅಂತರಾಷ್ಟ್ರೀಯ ಬುಕ್ಕಿ ಸಿಸಿಬಿ ವಶಕ್ಕೆ
ಆರೋಪಿ ಬಿಚ್ಚಿಟ್ಟ ಸತ್ಯದ ಆಧಾರದ ಮೇಲೆ ಆರೋಪಿ ಜೀತಿನ್‍ನ ಅಂಕಲ್ ವಿರುದ್ಧ ನಿನ್ನೆ ಮತ್ತೊಂದು ಕೇಸ್ ದಾಖಲಾಗಿದೆ. ಪೊಲೀಸರ ತನಿಖೆಯ ಜಾಡು ತಪ್ಪಿಸಲು ಪ್ರಯತ್ನಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಜೀತಿನ್ ಅಂಕಲ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.