ಪಾಕಿಸ್ತಾನ ಜಿಂದಾಬಾದ್ ಎಂದ ದೇಶದ್ರೋಹಿ ಅಮೂಲ್ಯ ಲಿಯೋನಾ ಯಾರು?

Public TV
2 Min Read
Amulya Leona

ಬೆಂಗಳೂರು: ಫ್ರೀಡಂ ಪಾರ್ಕಿನಲ್ಲಿ ನಡೆದ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಸಂಸದ ಅಸಾದುದ್ದಿನ್ ಓವೈಸಿ ಭಾಗಿಯಾಗಿದ್ದ ಸಮಾವೇಶದಲ್ಲಿ ಅಮೂಲ್ಯ ಲಿಯೋನಾ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಅಮೂಲ್ಯ ಮೂಲತಃ ಚಿಕ್ಕಮಗಳೂರಿನ ಕೊಪ್ಪದ ಹುಡುಗಿ. ಆಕೆಗೆ ಇನ್ನೂ 20 ವಯಸ್ಸು. ಆದರೆ ಎಡಪಂಥೀಯ ಚಿಂತಕಿ ಅಂತ ಕರೆಸಿಕೊಂಡ ಅಮೂಲ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತಾ ಶಾ ವಿರುದ್ಧ ಮಾತನಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾಳೆ. ಸಿಎಎ ವಿರೋಧಿ ಹೋರಾಟದಲ್ಲಿ ಗುರುತಿಸಿಕೊಂಡು ಹೋದಲ್ಲಿ ಬಂದಲ್ಲಿ ಮೈಕ್ ತಾನೇ ಕೇಳಿ ಪಡೆದುಕೊಂಡು ಮಾತನಾಡುತ್ತಿದ್ದಳು. ಅದರಂತೆ ಫ್ರೀಡಂ ಪಾರ್ಕ್ ನಲ್ಲಿ ಇಂದು ನಡೆದ ಸಿಎಎ ವಿರೋಧಿ ಹೋರಾಟದಲ್ಲಿ ಅಮೂಲ್ಯ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾಳೆ. ಇದನ್ನೂ ಓದಿ: ಬೆಂಗ್ಳೂರಿನ ಓವೈಸಿ ಕಾರ್ಯಕ್ರಮದ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದ ಯುವತಿ

caa amulya 2 e1582208212906

ಗೌರಿ ಲಂಕೇಶ್ ಹತ್ಯೆಯಾದಗಲೂ ಹೋರಾಟ ನಡೆಸುತ್ತಿದ್ದ ಅಮೂಲ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡುತ್ತಿದ್ದಳು. ಇದರಿಂದ ಕೆಲಕಾಲ ಆಕೆಯ ಖಾತೆ ಕೂಡ ಬ್ಲಾಕ್ ಮಾಡಲಾಗಿತ್ತು. ಧರ್ಮ ಧರ್ಮದ ಮಧ್ಯೆ ಕಿಚ್ಚು ಹಚ್ಚುವುದು ಈಕೆಯ ಕೆಟ್ಟ ಚಾಳಿ. ತಾನು ಬೇಗ ಪ್ರಚಾರಕ್ಕೆ ಬರಬೇಕು ಎನ್ನುವ ಹಪಾಹಪಿ ಇತ್ತು. ಹೀಗಾಗಿ ಇಂತಹ ದೇಶದ್ರೋಹಿ ಹೇಳಿಕೆ ನೀಡುತ್ತಿದ್ದಾಳೆ ಎಂಬ ಆರೋಪ ಸಾರ್ವಜನಿಕರಿಂದ ಬಂದಿದೆ.

ಮತಾಂತರ:
ಬೆಂಗಳೂರಿನ ಎನ್‍ಎಂಕೆಆರ್‍ವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಅಮೂಲ್ಯ ಈಗ ರೆಕಾರ್ಡಿಂಗ್ ಕಂಪನಿಯೊಂದರಲ್ಲಿ ಭಾಷಾಂತರದ ಕೆಲಸ ಮಾಡುತ್ತಿದ್ದಾಳೆ. ದೇಶದ್ರೋಹಿ ಅಮೂಲ್ಯ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾಳೆ. ತಾನು ಮೂಲತಃ ಗೌಡ ಸರಸ್ವತ ಬ್ರಾಹ್ಮಣ (ಜಿಎಸ್‍ಬಿ) ಧರ್ಮಕ್ಕೆ ಸೇರಿದವಳು. ಆದರೆ ತನ್ನ ಕುಟುಂಬಸ್ಥರು ಹಿಂದೂ ಸಂಪ್ರದಾಯದ ಸಹವಾಸದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರು ಅಂತ ಅಮೂಲ್ಯ ಹೇಳಿಕೊಂಡಿದ್ದಳು.

Amulya Leona A

ಅಮೂಲ್ಯ ಅದೆಂಥ ಕಿಲಾಡಿ ಅಂದ್ರೆ ಸುದ್ದಿಯಲ್ಲಿ ಬರಬೇಕು ಎನ್ನುವ ಹಪಾಹಪಿಯುಳ್ಳವಳು. 2020ರ ಫೆಬ್ರವರಿ 16ರಂದೇ ಆಕೆ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಬರೆದುಕೊಂಡಿದ್ದಳು. ಇದರಿಂದ ಹಿಗ್ಗಾಮುಗ್ಗಾ ತಪರಾಕಿ ಹಾಕಿಕೊಂಡಿದ್ದಳು.

ವಿವಾದತ್ಮಕ ಭಾಷಣದಿಂದ ಫೇಮಸ್ ಆಗಿದ್ದ ಅಮೂಲ್ಯ ಘಟಾನುಘಟಿ ನಾಯಕರ ಜೊತೆ ವೇದಿಕೆ ಹಂಚಿಕೊಂಡಿದ್ದಳು. ಅಷ್ಟೇ ಅಲ್ಲದೆ ಉಡುಪಿ, ಮಂಗಳೂರು, ಬೆಂಗಳೂರು ಸೇರಿದಂತೆ ಅನೇಕ ಕಡೆ ಬಾಡಿಗೆ ಭಾಷಣಗಾರ್ತಿಯಾಗಿ ತೆರಳುತ್ತಿದ್ದಳು.

Share This Article
Leave a Comment

Leave a Reply

Your email address will not be published. Required fields are marked *