ಆಂಧ್ರದಲ್ಲಿ ಬೆಂಗಳೂರಿನ ಉದ್ಯಮಿಗಳ ಅಪಹರಿಸಿ ಕೊಲೆ

Public TV
1 Min Read
Kadugodi andhra murder

ಬೆಂಗಳೂರು: ಇಲ್ಲಿನ ಕಾಡುಗೋಡಿ ಮೂಲದ ಉದ್ಯಮಿಗಳಾಗಿದ್ದ ಅಪ್ಪ ಹಾಗೂ ಮಗನನ್ನು ಅಪಹರಿಸಿ, ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ಬಾಪಟ್ಲ ಜಿಲ್ಲೆಯಲ್ಲಿ ನಡೆದಿದೆ.

ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ವೀರಸ್ವಾಮಿ ರೆಡ್ಡಿ ಹಾಗೂ ಅವರ ಪುತ್ರ ಮಹದೇವಪುರ ಬಿಜೆಪಿಯ ಯುವ ಮೋರ್ಚದ ಅಧ್ಯಕ್ಷರಾಗಿದ್ದ ಪ್ರಶಾಂತ್ ರೆಡ್ಡಿ ಮೃತರು. ಮುಂಬರುವ ಕಾರ್ಪೊರೇಟರ್ ಚುನಾವಣೆಯಲ್ಲಿ ನಿಲ್ಲಲು ಮುಂದಾಗಿದ್ದರು

ಮಂಗಳವಾರ ರಾತ್ರಿ ಆಂಧ್ರದಲ್ಲಿದ್ದ ಅಪ್ಪ, ಮಗ ಬುಧವಾರ ಚೆಕ್‌ಬೌನ್ಸ್ ಪ್ರಕರಣ ಸಂಬಂಧ ಕೋರ್ಟ್‌ಗೆ ತೆರಳುತ್ತಿದ್ದರು. ಈ ವೇಳೆ 6 ಜನ ದುರ್ಷ್ಕಮಿಗಳು ಕಪ್ಪು ಬಣ್ಣದ ಕಾರಿನಲ್ಲಿ ಬಂದು ಕೃತ್ಯ ಎಸಗಿದ್ದಾರೆ. ಇಬ್ಬರನ್ನು ಅಪಹರಿಸಿ ಬಳಿಕ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

ಜಮೀನು, ಹಣಕಾಸು ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Share This Article