ಬೆಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದ ಉದ್ಯಮಿ ಒಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಕಳ್ಳರು ಹಣ ಎಗರಿಸಿರುವ ಘಟನೆ ಸಿಲಿಕಾನ್ ಸಿಟಿಯ ವಿಧಾನಸೌಧದ ಬಳಿ ನಡೆದಿದೆ.
ತಮ್ಮ ಬೈಕಿನಲ್ಲಿ ಶಿವಾಜಿನಗರದಿಂದ ಚಾಮರಾಜಪೇಟೆ ಹೋಗುತ್ತಿದ್ದ ಉದ್ಯಮಿ ಪಿಯುಶ್ ಕುಮಾರ್ ವಿಧಾನಸೌಧದ ಬಳಿ ಅಯತಪ್ಪಿ ಬೈಕಿನಲ್ಲಿ ಬಿದ್ದಿದ್ದಾರೆ. ಈ ವೇಳೆ ಸಹಾಯ ಮಾಡುವ ನೆಪದಲ್ಲಿ ಬಂದವರು ಬೈಕ್ ಡಿಕ್ಕಿಯಲ್ಲಿದ್ದ 2.30 ಲಕ್ಷ ಹಣವನ್ನು ಕಳ್ಳತನ ಮಾಡಿದ್ದಾರೆ.
ಉದ್ಯಮಿ ಪಿಯುಶ್ ಕುಮಾರ್ ಶಿವಾಜಿನಗರದ ಗ್ರಾಹಕರ ಅಂಗಡಿಯಿಂದ ಹಣ ಪಡೆದು ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.