ನವದೆಹಲಿ: ನಗರದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಈಚೆಗೆ ನಡೆದ ರಾಜಸ್ಥಾನ (Rajasthan) ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ.
ರಾಜಾಜಿನಗರ ನಿವಾಸಿ ಲಾಡೂಲಾಲ್ ಪಿಟ್ಲಿಯಾ (52) (Ladulal Pitliya) ಎಂಬ ವ್ಯಕ್ತಿ ಬೆಂಗಳೂರಿನ (Bengaluru) ಚಿಕ್ಕಪೇಟೆಯಲ್ಲಿ ಜವಳಿ ಅಂಗಡಿ ನಡೆಸುತ್ತಿದ್ದರು. ಈಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ರಾಜಸ್ಥಾನದ ಸಹರಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
चप्पा चप्पा भाजपा ???? pic.twitter.com/8YQL615haa
— Ladulal Pitliya (@LadulalPitliya) November 17, 2023
ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ರಾಜೇಂದ್ರ ತ್ರಿವೇದಿ ವಿರುದ್ಧ ಲಾಡೂಲಾಲ್ ಕಣಕ್ಕಿಳಿದಿದ್ದರು. ಬರೋಬ್ಬರಿ 1.17 ಲಕ್ಷ ಮತ ಪಡೆದು, 54,684 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಇದನ್ನೂ ಓದಿ: 3 ರಾಜ್ಯಗಳಲ್ಲಿ ಮೋದಿ ಪಡೆಗೆ ಭರ್ಜರಿ ಗೆಲುವು – ಗ್ಯಾರಂಟಿಯಿಂದಲೇ ತೆಲಂಗಾಣದಲ್ಲಿ ಗೆದ್ದ ಕಾಂಗ್ರೆಸ್
‘2018 ರ ರಾಜಸ್ಥಾನ ಚುನಾವಣೆಯಲ್ಲಿ ಪಿಟ್ಲಿಯಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಇದು ಬಿಜೆಪಿಗೆ ಸಮಸ್ಯೆಯಾಗಿ ಪರಿಣಮಿಸಿತು. ಪಿಟ್ಲಿಯಾ ಅವರಿಗೆ ಮನವರಿಕೆ ಮಾಡಲು ನಾನು ಅವರ ಮನೆಗೆ ಭೇಟಿ ನೀಡಿದ್ದು ನೆನಪಿದೆ. ನಮ್ಮ ಮನವಿಗೆ ಆಗ ಅವರು ಒಪ್ಪಲಿಲ್ಲ’ ಎಂದು ಶಾಸಕ ಎಸ್.ಸುರೇಶ್ ಕುಮಾರ್ ನೆನಪಿಸಿಕೊಂಡಿದ್ದಾರೆ. ಆ ಚುನಾವಣೆಯಲ್ಲಿ ಪಿಟ್ಲಿಯಾ ಅವರು 30,573 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದರು.
आभार सहाड़ा ???????? pic.twitter.com/IKi3pWWH0B
— Ladulal Pitliya (@LadulalPitliya) November 6, 2023
ರಾಜಾಜಿನಗರದಲ್ಲಿ ಈಗ ಇಬ್ಬರು ಶಾಸಕರಿದ್ದಾರೆ. ಒಬ್ಬರು ಹಾಜರ್, ಒಬ್ಬರು ಗೈರು ಎಂದು ರಾಜಾಜಿನಗರ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಹಾಸ್ಯ ಮಾಡಿದ್ದಾರೆ.
ಪಿಟ್ಲಿಯಾ ಅವರು ರಾಜಾಜಿನಗರ 2ನೇ ಬ್ಲಾಕ್‌ನ ಜುಗನಹಳ್ಳಿಯಲ್ಲಿ ವಾಸವಾಗಿದ್ದರು. ಅವರಿಗೆ ಅಲ್ಲಿ ದೊಡ್ಡ ಮನೆ ಇದೆ. ಅವರು ಜವಳಿ ವ್ಯಾಪಾರದಲ್ಲಿದ್ದಾರೆ. ಅವರ ಮಕ್ಕಳು ಚಿಕ್ಕಪೇಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಗನ ಹಂತಕರನ್ನು ಕಾಂಗ್ರೆಸ್ ಬೆಂಬಲಿಸಿದ್ದಕ್ಕೆ ಸೇಡು – 7 ಬಾರಿ ಗೆದ್ದಿದ್ದ ‘ಕೈ’ ಶಾಸಕನ ಮಣಿಸಿದ ಬಿಜೆಪಿ ಅಭ್ಯರ್ಥಿ