ಬೆಂಗಳೂರು: ಬಿಎಂಟಿಸಿ, ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸರ ಜಂಟಿ ಸಹಯೋಗದ ಮಹತ್ವಾಕಾಂಕ್ಷಿ ಯೋಜನೆಯೇ ಪ್ರತ್ಯೇಕ ಬಸ್ ಪಥ ಕಳೆದ ನವೆಂಬರ್ 15ರಿಂದ ನಗರದ ಕೆ.ಆರ್.ಪುರಂ ನಿಂದ ವೈಟ್ ಫೀಲ್ಡ್ ವರೆಗೆ ‘ನಿಮ್ಮ ಬಸ್’ ಅಂತ ಹೆಸರಿನಲ್ಲಿ ಓಡಿಸಲಾಗುತ್ತಿದೆ.
ಆದರೆ ಈ ಪಥ ಅಷ್ಟು ಜನಪ್ರಿಯವಾಗಿಲ್ಲ. ಈ ಬಗ್ಗೆ ಫೇಸ್ ಬುಕ್ ಹಾಗೂ ವಾಟ್ಸಪ್ ಗಳಲ್ಲಿ ಬಿಎಂಟಿಸಿಯಿಂದ ಜಾಹೀರಾತುಗಳನ್ನು ಮಾಡಿ ಪ್ರಚಾರ ಮಾಡಲಾಗುತ್ತಿದೆ. ಇನ್ನೂ ಮುಂದುವರೆದು ಬಿಎಂಟಿಸಿ ಈ ಪಥಕ್ಕೆ ಕನ್ನಡದ ಖ್ಯಾತ ಚಿತ್ರನಟ ಪುನೀತ್ ರಾಜ್ ಕುಮಾರ ಅವರನ್ನು ಬಸ್ ಪ್ರಿಯಾರಿಟಿ ಲೇನ್ ನ ಬ್ರಾಂಡ್ ಅಂಬಾಸಿಡರ್ ಮಾಡಲು ಮುಂದಾಗಿದೆ.
Advertisement
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಎಂಟಿಸಿಯ ಅಧ್ಯಕ್ಷರಾದ ನಂದೀಶ್ ರೆಡ್ಡಿ, ಪುನೀತ್ ರಾಜ್ ಕುಮಾರ್ ಅವರ ಜೊತೆ ಮಾತನಾಡಿದ್ದೇವೆ. ಅವರು ಒಪ್ಪಿದರೆ ಈ ಯೋಜನೆ ಸಕ್ಸಸ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.