ಬೆಂಗಳೂರು: ದಬಾಂಗ್ ಡೆಲ್ಲಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ 61 – 22 ಪಾಯಿಂಟ್‍ಗಳೊಂದಿಗೆ 39 ಅಂಕಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಒಟ್ಟು 28 ಅಂಕಗಳಿಂದ ಮೂರನೇ ಸ್ಥಾನದಲ್ಲಿದೆ.
Advertisement
ಏಕಮುಖಿಯಾಗಿ ಸಾಗಿದ ಪಂದ್ಯದಲ್ಲಿ ಪವನ್ ಶೆರವತ್ ಡೆಲ್ಲಿ ವಿರುದ್ಧ ರೈಡಿಂಗ್‍ನಲ್ಲಿ ಸವಾರಿ ಮಾಡಿದರು. ಒಟ್ಟು 22 ರೈಡ್ ಮತ್ತು 5 ಬೋನಸ್ ಪಾಯಿಂಟ್‍ನೊಂದಿಗೆ ಒಟ್ಟು 27 ಅಂಕಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಭರತ್ 3 ರೈಡ್, 2 ಟೇಕಲ್ ಮತ್ತು 2 ಬೋನಸ್ ಪಾಯಿಂಟ್ ಸೇರಿ ಒಟ್ಟು 7 ಅಂಕ ತಂಡಕ್ಕೆ ಕೊಡುಗೆ ನೀಡಿದರು. ಇದನ್ನೂ ಓದಿ: ಯಾದವ್ ಬೌಲಿಂಗ್‍ಗೆ ಕೇಶವ್ ಕ್ಲೀನ್ ಬೌಲ್ಡ್ – ಎಗರಿ ಮಾರುದ್ದ ಬಿದ್ದ ಮಿಡಲ್ ಸ್ಟಂಪ್
Advertisement
???????????????????? ????-???????????????? ????????, ????????????????????, ???????????????????? ???????????????? ???????? ???????????????????? ???????????????????????? ????????????????????????!????????@BengaluruBulls with a HUGE win over the title favourites, @DabangDelhiKC! ????#SuperhitPanga pic.twitter.com/nDWPhlEbF4
— ProKabaddi (@ProKabaddi) January 12, 2022
Advertisement
ಮೊದಲಾರ್ಧದಿಂದಲೇ ಭಾರೀ ಮುನ್ನಡೆ ಪಡೆದುಕೊಂಡ ಬೆಂಗಳೂರು 27 – 11 ಅಂಕಗಳಿಂದ ಡೆಲ್ಲಿಗೆ ಟಕ್ಕರ್ ಕೊಟ್ಟಿತು. ನಂತರ ದ್ವಿತೀಯಾರ್ಧದಲ್ಲಿ ಪಾಯಿಂಟ್ ಹೆಚ್ಚಿಸಿದ ಬೆಂಗಳೂರು ತಂಡ ಒಟ್ಟು 35 ರೈಡಿಂಗ್, 1 ಸೂಪರ್ ರೈಡ್, 15 ಟೇಕಲ್, 10 ಆಲೌಟ್ ಮತ್ತು 1 ಇತರೆ ಅಂಕ ಸಹಿತ ಒಟ್ಟು 61 ಪಾಯಿಂಟ್ ಕಲೆ ಹಾಕಿತು. ಇತ್ತ ಡೆಲ್ಲಿ 16 ರೈಡಿಂಗ್, 4 ಟೇಕಲ್, 2 ಇತರೆ ಅಂಕಗಳಿಂದ 22 ಪಾಯಿಂಟ್ ಗಳಿಸಿ 39 ಅಂಕಗಳ ಅಂತರದ ದೊಡ್ಡ ಸೋಲು ಕಂಡಿತು. ಇದನ್ನೂ ಓದಿ: ವಾಷಿಂಗ್ಟನ್ ಸುಂದರ್‌ಗೆ ಕೊರೊನಾ – ಜಯಂತ್ ಯಾದವ್‌ಗೆ ಒಲಿದ ಅದೃಷ್ಟ
Advertisement