ಬೆಂಗಳೂರು: ಬಾಬುಸಾಬ್‌ಪಾಳ್ಯ (Babusapalya) ನಿರ್ಮಾಣ ಹಂತದ ಕಟ್ಟಡ ಬಿದ್ದ ಪ್ರಕರಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಕಟ್ಟಡ ಮಾಲೀಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಭುವನ್ ರೆಡ್ಡಿ ಬಂಧಿತ ವ್ಯಕ್ತಿ. ಅವಘಡ ಸಂಭವಿಸಿದ ಕಟ್ಟಡ ಭುವನ್ ರೆಡ್ಡಿ ಹೆಸರಿನಲ್ಲಿತ್ತು. ಈತ ಮೊದಲನೇ ಆರೋಪಿ ಮುನಿರಾಜ ರೆಡ್ಡಿಯ ಮಗ. ಹೆಣ್ಣೂರು ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ. ಕಾಂಟ್ರಾಕ್ಟರ್ ಮುನಿಯಪ್ಪನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನಿಯಪ್ಪ 4ನೇ ಮಹಡಿವರೆಗೆ ಕಟ್ಟಡ ನಿರ್ಮಾಣ ಮಾಡಿದ್ದ. ಹೀಗಾಗಿ ಪೊಲೀಸರು ಆತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಿಎನ್‌ಎಸ್ (BNS), ಬಿಬಿಎಂಪಿ(BBMP) ಆರ್‌ಇಆರ್‌ಎ (RERA) ಆ್ಯಕ್ಟ್ ಹಾಗೂ ರೇರಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಇವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ | ಅಕ್ರಮ ಸಂಬಂಧದ ಶಂಕೆ – ಕತ್ತು ಸೀಳಿ ಪತ್ನಿಯ ಕೊಲೆಗೈದ ಪತಿ
ಈಗ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಆರಕ್ಕೇರಿದೆ. ಮೃತ ತ್ರಿಪಾಲ್‌ನ ಮೃತದೇಹವನ್ನ ಅವಶೇಷಗಳಿಂದ ಸಿಬ್ಬಂಗಳು ಹೊರತೆಗೆದಿದ್ದಾರೆ. ಬಿಎನ್‌ಎಸ್, ಬಿಬಿಎಂಪಿ ಆರ್‌ಇಆರ್‌ಎ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಮಿಕ ಮೊಹಮ್ಮದ್ ಹರ್ಷದ್ ನೀಡಿರೋ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಜೈಲು ನಿಯಮ ಉಲ್ಲಂಘನೆ – ದರ್ಶನ್ ಒಳಿತಿಗೆ ಪತ್ನಿ ಕಟ್ಟಿದ್ದ ದಾರ ತೆಗೆಸುವ ಸಾಧ್ಯತೆ
ಬಿಎನ್ ಎಸ್ 105, 125(A) 125(B), 270,3(5) ಬಿಬಿಎಂಪಿ ಆ್ಯಕ್ಟ್ 326, 327,328 RERA (u/s3) ಅಡ್ಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ – ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ
ಯಾವ ಆ್ಯಕ್ಟ್ ಏನು ಹೇಳುತ್ತೆ?
ಬಿಎನ್‌ಎಸ್ 105 – ಮಾನವ ನರಹತ್ಯೆ
ಬಿಎನ್‌ಎಸ್ 125(A) – ಇತರರ ಪ್ರಾಣಕ್ಕೆ ಅಥವಾ ದೈಹಿಕ ಸುರಕ್ಷತೆಗೆ ಅಪಾಯ ಉಂಟುಮಾಡುವುದು
ಬಿಎನ್‌ಎಸ್ 125(B)-ನಿರ್ಲಕ್ಷ್ಯದಿಂದ ತೀವ್ರವಾಗಿ ಗಾಯ ಉಂಟುಮಾಡುವುದು
ಬಿಎನ್‌ಎಸ್ 270- ಸಾರ್ವಜನಿಕ ಉಪದ್ರವ,ಇತರರಿಗೆ ಕಿರಿಕಿರಿ ಉಂಟು ಮಾಡುವುದು
3(5) – ಅವಘಡ ಮುನ್ಸೂಚನೆ ಇದ್ದರು ಕೂಡಾ ನಿರ್ಲಕ್ಷ್ಯ ವಹಿಸುವುದು
ಬಿಬಿಎಂಪಿ ಆ್ಯಕ್ಟ್ 326- ಬಿಬಿಎಂಪಿ ಕಾಯ್ದೆ ಉಲ್ಲಂಘನೆ ಬಗ್ಗೆ ಒಂದು ವರ್ಷ ಜೈಲು, 2 ಲಕ್ಷ ದಂಡ
ಬಿಬಿಎಂಪಿ ಆ್ಯಕ್ಟ್ 327- ಬಿಬಿಎಂಪಿ ನಿಯಮಗಳ ಬಗ್ಗೆ 6 ವರ್ಷ ಜೈಲು,2 ಲಕ್ಷ ದಂಡ
ಬಿಬಿಎಂಪಿ ಆ್ಯಕ್ಟ್ 328 – ನಿಯಮ ಉಲ್ಲಂಘನೆ ದಂಡ
RERA (u/s 3) ಆ್ಯಕ್ಟ್ – ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸದೆ ಇರುವುದು. ಇದನ್ನೂ ಓದಿ: ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯವೇನಿಲ್ಲ – ನಿಖಿಲ್ ಕುಮಾರಸ್ವಾಮಿ