ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಕ್ಯಾಬಿನೆಟ್‍ನಲ್ಲಿ ತಲೆನೋವಾಗಿರುವುದು ಜಲಸಂಪನ್ಮೂಲ ಖಾತೆ ನಿರ್ವಹಣೆ. ಹಠಕ್ಕೆ ಬಿದ್ದು ಸವಾಲು ಗೆಲ್ಲಲು ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆಯನ್ನ ಪಡೆದುಕೊಂಡ್ರು. ಆದರೆ ಇದೀಗ ಮಹಾದಾಯಿ ಸೇರಿದಂತೆ ಅಂತಾರಾಜ್ಯ ನದಿ ವಿವಾದಗಳನ್ನ ಬಹಳ ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳಬೇಕಿದೆ. ಮಹಾದಾಯಿ ನ್ಯಾಯಧೀಕರಣದ ತೀರ್ಪು ಗೆಜೆಟ್ ನೋಟಿಫಿಕೇಶನ್ ಕೂಡ ಆಗಿದ್ದು, ಜಲಸಂಪನ್ಮೂಲ ಇಲಾಖೆಗೆ ಮಹತ್ತರ ಪಾತ್ರವಿದೆ. ಈ ಹಿನ್ನೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ನಿವಾಸಕ್ಕೆ ರಮೇಶ್ ಜಾರಕಿಹೊಳಿ ಕರೆದು ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ.
Advertisement
ಅಂದಹಾಗೆ ಸಾಹುಕಾರನಿಗೆ ಜಲಸಂಪನ್ಮೂಲ ಆಳ ಆಗಲ ಫುಲ್ ಟಫ್ ಆಗ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಮಹಾದಾಯಿ ಗೆಜೆಟ್ ನೋಟಿಫಿಕೇಶ್ ಆದ ಬೆಳಗ್ಗೆಯೇ ರಮೇಶ್ ಜಾರಕಿಹೊಳಿಯನ್ನ ಯಡಿಯೂರಪ್ಪ ತಮ್ಮ ಡಾಲರ್ಸ್ ಕಾಲೋನಿ ನಿವಾಸಕ್ಕೆ ಕರೆಸಿಕೊಂಡಿದ್ರು. ಆಗ ರಮೇಶ್ ಎಚ್ಚರಿಕೆಯಿಂದ ಇಲಾಖೆ ನೋಡ್ಕೊಬೇಕಪ್ಪಾ ಅಂತ ಕಿವಿಮಾತನ್ನ ಹೇಳಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ.
Advertisement
Advertisement
ಜಲಸಂಪನ್ಮೂಲ ಇಲಾಖೆಯಲ್ಲಿ ಡಿಕೆಶಿ, ರೇವಣ್ಣಗೆ ಕೆಲವು ಎಂಜಿನಿಯರ್‍ಗಳು ಬಹಳ ಕ್ಲೋಸ್ ಇದ್ದಾರೆ. ಸ್ವಲ್ಪ ಯಮಾರಿದ್ರೂ ಆಪ್ತ ಎಂಜಿನಿಯರ್‍ಗಳ ಮೂಲಕ ಅವರಿಬ್ಬರೇ ಹಳ್ಳ ತೋಡ್ತಾರೆ. ಹಾಗಾಗಿ ಎಚ್ಚರಿಕೆಯಿಂದ ಎಲ್ಲೂ ಹಾದಿ ತಪ್ಪದೇ ಜಲಸಂಪನ್ಮೂಲ ಇಲಾಖೆ ನೋಡ್ಕೋಬೇಕು ಅಂತ ರಮೇಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ಷ್ಮವಾಗಿ ಹೇಳಿದ್ದಾರಂತೆ.
Advertisement
ಅಷ್ಟೇ ಅಲ್ಲ ಜಲಸಂಪನ್ಮೂಲ ಇಲಾಖೆ ಬಗ್ಗೆ ಯಡಿಯೂರಪ್ಪ ಹೆಚ್ಚು ಗಮನ ಹರಿಸ್ತಿದ್ದಾರೆ ಎನ್ನಲಾಗಿದೆ. ಅಂತಾರಾಜ್ಯ ನದಿ ವಿವಾದಗಳನ್ನು ಎಚ್ಚರಿಕೆಯಿಂದ ಹ್ಯಾಂಡಲ್ ಮಾಡಿಕೊಳ್ಳಬೇಕು. ಅಧಿಕಾರಿಗಳಿಂದ ಚೆನ್ನಾಗಿ ಬ್ರೀಫಿಂಗ್ ತೆಗೆದುಕೊಂಡು ಅಧ್ಯಯನ ಮಾಡಬೇಕು. ಯಾವುದೇ ಕಾರಣಕ್ಕೂ ವಿವಾದಾತ್ಮಕ ಹೇಳಿಕೆಯನ್ನ ಕೊಡಬಾರದೆಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಾಕೀತು ಮಾಡಿದ್ದಾರೆ ಅನ್ನೋದು ಸರ್ಕಾರ ಮಟ್ಟದಲ್ಲಿ ಹೆಚ್ಚು ಚರ್ಚೆ ಆಗ್ತಿದೆ.