ಬೆಂಗಳೂರು: ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿ ವಾರ ಕಳೆದರೂ ಇನ್ನೂ ಸಂಪುಟ ರಚನೆಯಾಗಿಲ್ಲ. ಈ ಮಧ್ಯೆ ಬಿಜೆಪಿ, ಅತೃಪ್ತರಿಂದ ಅತೃಪ್ತರಿಗಾಗಿ ಅತೃಪ್ತರಿಗೋಸ್ಕರ ಸಂಪುಟ ಕಸರತ್ತು ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅತೃಪ್ತರಿಗಾಗಿ ಅರ್ಧ ಸಂಪುಟ ರಚನೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಅತೃಪ್ತರಿಗೋಸ್ಕರ ಸಚಿವ ಸಂಪುಟ 15 ಸ್ಥಾನಗಳಿಗೇ ಸೀಮಿತವಾಗಿಸಲು ಬಿಜೆಪಿಯ ಕೇಂದ್ರ ನಾಯಕರು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
Advertisement
Advertisement
ಏನದು ಪ್ಲಾನ್?
ಅರ್ಧ ಸಂಪುಟ ರಚನೆ ಮಾಡುವ ಮೂಲಕ ಬಿಜೆಪಿ ಅತೃಪ್ತರ ಋಣ ತೀರಿಸಲು ಮುಂದಾಗಿದೆ. ಹೀಗಾಗಿ ಅತೃಪ್ತರಿಗೋಸ್ಕರ ಅರ್ಧ ಕ್ಯಾಬಿನೆಟ್ ರಚಿಸಲು ಅಮಿತ್ ಶಾ ನಿರ್ಧಾರ ಮಾಡಿದ್ದಾರೆ.
Advertisement
ಮೊದಲ ಹಂತದಲ್ಲಿ 15 ಶಾಸಕರಿಗಷ್ಟೇ ಮಂತ್ರಿಗಿರಿ ನೀಡಲಾಗುತ್ತದೆ. ಉಳಿದ ಸಚಿವ ಸ್ಥಾನಗಳು ಅತೃಪ್ತರಿಗಾಗಿ ಮೀಸಲಿಡಲಾಗುತ್ತದೆ. ಸುಪ್ರೀಂಕೋರ್ಟ್ ತೀರ್ಮಾನದ ಬಳಿಕ ಅತೃಪ್ತರಿಗೆ ಸಚಿವ ಸ್ಥಾನದ ಬಗ್ಗೆ ನಿರ್ಧರಿಸಲಾಗುತ್ತದೆ.
Advertisement
ಸಂಘ, ಪಕ್ಷ ನಿಷ್ಠ, ಜಾತಿ, ಜಿಲ್ಲಾವಾರು ಆಧರಿಸಿ ಮಂತ್ರಿಗಿರಿಯನ್ನು ಕೊಡಲಾಗುತ್ತದೆ. ಮುಂದಿನ ಶುಕ್ರವಾರ ಅರ್ಧ ಕ್ಯಾಬಿನೆಟ್ ರಚಿಸಲು ಕೇಂದ್ರದ ವರಿಷ್ಠರು ಬಿಎಸ್‍ವೈಗೆ ಸಂದೇಶ ರವಾನಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.