ಬೆಂಗಳೂರು: ಸಿಎಂ ಯಡಿಯೂರಪ್ಪ ಈಗ ಕೊಂಚ ಬದಲಾಗಿದ್ದಾರಂತೆ. ಬೈ ಎಲೆಕ್ಷನ್ ಗೆದ್ದಮೇಲಂತೂ ಅವರು ಮುಖದಲ್ಲಿ ನಗು ನಗು. ಯೆಸ್, ಉಪಚುನಾವಣೆ ಗೆದ್ದ ಮೇಲೆ ಯಡಿಯೂರಪ್ಪ ಕೂಲ್ ಕೂಲ್. ಯಡಿಯೂರಪ್ಪ ಅಂದ್ರೆ ಟೆನ್ಶನ್, ಕೋಪತಾಪ ಅಂತಿದ್ದವರಿಗೆ ಈಗ ಬೇರೆ ರೀತಿ ಕಾಣಿಸೋದಕ್ಕೆ ಶುರು ಆಗಿದೆಯಂತೆ.
ಯಡಿಯೂರಪ್ಪ ಕೋಪ ಮಾಡಿಕೊಂಡು ಕಣ್ಣನ್ನು ಸ್ವಲ್ಪ ದಿಟ್ಟಿಸಿದರೆ ಎದುರಿಗೆ ಇದ್ದವರು ಸೈಡಿಗೆ ಹೋಗಿಬಿಡ್ತಾರೆ. ಅಷ್ಟೇ ಏಕೆ ಅವರು ಕೋಪದಲ್ಲಿ ಏನಾದ್ರೂ ಬೈಯ್ದುಬಿಟ್ಟರೆ ಅಂತಾ ಚೆಲ್ಲಾಪಿಲ್ಲಿ ಆಗುತ್ತಾರೆ. ಅಂತಹ ಯಡಿಯೂರಪ್ಪ ಡಿಸೆಂಬರ್ 9 ರ ನಂತರ ಕೂಲ್ ಆಗಿದ್ದಾರಂತೆ. ಹೋದವರ ಜತೆ ನಕ್ಕು ಮಾತಾಡ್ತಾರಂತೆ.
ಅಂದಹಾಗೆ ಯಡಿಯೂರಪ್ಪ ಬದಲಾಗಿರೋದ್ದನ್ನು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಸಿಕ್ಕ ಆ ಶಾಸಕ ನಮ್ಮ ರಾಜಾಹುಲಿ ಸಾಹೇಬರು ಈಗ ಫುಲ್ ಕೂಲ್ ಆಗಿದ್ದಾರೆ ಬಿಡ್ರಣ್ಣಾ ಎಂದು ಸ್ಟೋರಿ ಹೇಳೋದಕ್ಕೆ ಶುರು ಮಾಡಿದ್ರು. ಯಡಿಯೂರಪ್ಪ ನಗಿಸುವ ಜನ ಇದ್ದರೆ ನಗುತ್ತಾರೆ. ನಮ್ ಜತೆ ಬರೀ ನಗ್ತಾನೇ ಇದ್ರು. ಮುಖ ಗಂಟು ಹಾಕ್ಕೊಂಡು ಇರುವ ಯಡಿಯೂರಪ್ಪ ಬದಲಾಗಿದ್ರು. ಮೂರೂವರೆ ವರ್ಷ ಸಿಎಂ ಆಗಿರ್ತೀನಿ ಎಂದು ನೆಮ್ಮದಿ ಸಿಕ್ಕಾಗ ಯಾರಿಗೆ ತಾನೇ ಅಷ್ಟು ಖುಷಿ ಆಗಲ್ಲ ಹೇಳಿ ಅಂತಾ ಮಾಧ್ಯಮವರನ್ನೇ ಪ್ರಶ್ನಿಸಿದರು.
ಇನ್ನು ಯಡಿಯೂರಪ್ಪ ಅವರನ್ನ ಹತ್ತಿರದಿಂದ ನೋಡಿದವರು ಇದೇ ರೀತಿ ವಾಖ್ಯಾನ ಮಾಡಿದ್ದಾರೆ. ಸಿಎಂ ಕಚೇರಿ, ನಿವಾಸದಲ್ಲಿ ಸಿಬ್ಬಂದಿ ಜತೆ, ಅಧಿಕಾರಿಗಳ ಜತೆ ಈಗ ಸ್ವಲ್ಪ ಕೂಲ್ ಆಗಿದ್ದಾರಂತೆ. ಜತೆಗೆ ಟಿವಿ ಮೊಬೈಲ್ ನಲ್ಲಿ ರಾಜಕೀಯ ಸಂಬಂಧಿತ ವಿಡಿಯೋ ನೋಡೋದು ಕೂಡ ಜಾಸ್ತಿ ಆಗಿದೆ ಅಂತೆ. ಆದರೆ ಕೋಪತಾಪ ಹೆಚ್ಚಾಗಿರುವ ಯಡಿಯೂರಪ್ಪ ತಮ್ಮ ನೈಜತೆಯನ್ನು ಅಷ್ಟು ಸಲೀಸಲಾಗಿ ಬಿಡಲು ಕಷ್ಟ. ಆದರೆ ಮೊದಲಿನಷ್ಟು ಸಿಟ್ಟು, ಸಿಡುಕು ಕಡಿಮೆ ಮಾಡಿಕೊಳ್ಳಬಹುದು. ಅದಕ್ಕೆ ಏನೋ ಯಡಿಯೂರಪ್ಪ ನಗುವ ಫೋಟೋಗಳೇ ಇತ್ತೀಚೆಗೆ ಸಖತ್ ಓಡಾಡ್ತಿರೋದು. ಏನೇ ಆಗಲಿ ರಾಜ್ಯದ ಸಿಎಂ ಖುಷಿಯಾಗಿರಲಿ, ಆಡಳಿತನೂ ಜನರಿಗೆ ಖುಷಿತರುವಂತಿದ್ರೆ ಸಾಕು ಅಲ್ವಾ?