ಬೆಂಗಳೂರು: ಬ್ರಿಗೇಡ್ ರೋಡ್‍ನ (Brigade road) ಪಬ್ (Pub) ಒಂದರಲ್ಲಿ ಲೈಟ್ ನೈಟ್ ಪಾರ್ಟಿ (Light Night Party) ಮಾಡುತ್ತಿದ್ದವರ ಮೇಲೆ ಕರ್ನಾಟಕ ಕಾರ್ಮಿಕರ ಪರಿಷತ್ ಕಾರ್ಯಕರ್ತರು ತಡರಾತ್ರಿ ದಾಳಿ ಮಾಡಿದ ಘಟನೆ ನಡೆದಿದೆ.
ನಗರದಲ್ಲಿ ಹೆಚ್ಚುತ್ತಿರುವ ಪಾಶ್ಚಿಮಾತ್ಯ ಸಂಸ್ಕøತಿ ವಿರೋಧಿಸಿ ಡೋಲು ಬಡಿದುಕೊಂಡು 15 ಜನರ ಗುಂಪು ಪಬ್ ಪ್ರವೇಶಿಸಲು ಮುಂದಾಗಿದೆ. ಸಂಘಟನೆಯ ಕಾರ್ಯಕರ್ತರನ್ನು ಪಬ್ ಬೌನ್ಸರ್‍ಗಳು ಬಾಗಿಲಿನಲ್ಲೇ ತಡೆದಿದ್ದಾರೆ. ಬೌನ್ಸರ್‍ಗಳು ಹಾಗೂ ಗುಂಪಿನ ನಡುವೆ ಮಾತಿನ ಚಕಮುಕಿ ನಡೆದಿದೆ. ನಂತರ ಪಬ್‍ನ ಎದುರು ಎರಡು ಗುಂಪುಗಳು ಹೊಡೆದಾಡಿಕೊಂಡಿವೆ. ಇದನ್ನೂ ಓದಿ: ಮತ್ತೊಂದು ಕೇಸ್ – ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ
Advertisement
Advertisement
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಶೋಕನಗರ (Ashoka Nagar) ಪೊಲೀಸರು (Police) ಭೇಟಿ ನೀಡಿ ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದವರನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ಕಾಲುವೆ ಕಡೆ ಬಸ್ ಚಲಾಯಿಸಿದ ಚಾಲಕ – ಪ್ರಯಾಣಿರಿಂದ ಕ್ಲಾಸ್