ಬೆಂಗಳೂರು: ಸಿಲಿಕಾನ್ ಸಿಟಿಯ ಬಾಲಕನೊಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪತಾಕೆಯನ್ನು ಹಾರಿಸಿದ್ದಾನೆ. ಬಾಲಕನ ಸಾಧನೆ ತನ್ನ ವಯಸ್ಸನ್ನೇ ಮೀರಿಸಿದ್ದು, ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾನೆ.
ಬೆಂಗಳೂರಿನ ಬಾಗಲಗುಂಟೆಯ ನಿವಾಸಿಗಳಾದ ಶಿವಲಿಂಗ ಮತ್ತು ಮಂಜುಳ ದಂಪತಿಯ ಪುತ್ರ ನಿಶಾಂತ್ ಸಾಧನೆಗೈದ ಬಾಲಕ. ಶಿವಲಿಂಗ ಮತ್ತು ಮಂಜುಳ ಪುತ್ರನನ್ನು ಎಲ್ಲರಂತೆಯೇ ಅಬಾಕಸ್ ತರಗತಿಗೆ ಸೇರಿಸಿದ್ದರು. ನಿಶಾಂತ್ ಪುಟ್ಟ ವಯಸ್ಸಿನಲ್ಲಿಯೇ ಅಬಾಕಸ್ ತರಗತಿಗೆ ಸೇರಿಕೊಂಡು, ಪರಿಣಿತಿ ಹೊಂದಿದ್ದು ಅಬಾಕಸ್ ಲೆವೆಲ್ ನಲ್ಲಿ ಶಾಲಾ ಮಟ್ಟ, ವಿಭಾಗ ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ರಾಷ್ಟ್ರ ಮಟ್ಟವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆದಿದ್ದಾನೆ.
Advertisement
Advertisement
ಚೀನಾದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಟ್ಟದ ಅಬಾಕಾಸ್ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಹಲವು ದೇಶದ ಪುಟಾಣಿಗಳು ಭಾಗವಹಿಸಿದ್ದರು. ಅಂತರಾಷ್ಟ್ರೀಯಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಶಾಂತ್ ತನ್ನ ಪರಿಣಿತಿಯ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ.
Advertisement
ಅಬಾಕಾಸ್ ಸ್ಪರ್ಧೆಯಲ್ಲಿ ಭಾರತ ಚೀನಾ, ಜಪಾನ್, ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ 40 ದೇಶಗಳು ಭಾಗವಹಿಸಿದ್ದವು. 40 ದೇಶಗಳಿಂದ 1000 ಕ್ಕೂ ಹೆಚ್ಚು ಅಬಾಕಾಸ್ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ 5 ನಿಮಿಷ ಸಮಯಾವಕಾಶ ನೀಡಿ 80 ಹಂತದ ಲೆಕ್ಕಗಳನ್ನ ನೀಡಲಾಗಿತ್ತು. ಕ್ಲಿಷ್ಟಕರ ಲೆಕ್ಕಗಳನ್ನ ಯಾವುದೇ ಡಿಜಿಟಲ್ ಉಪಕರಣಗಳನ್ನು ಬಳಸದೇ, ತನ್ನ ಕೈ ಬೆರಳಿನ ಏಣಿಕೆಯ ಮುಖಾಂತರವೇ ಕೇವಲ ಮೂರು ನಿಮಿಷಕ್ಕೆ ಸಂಪೂರ್ಣ ಮಾಡಿದ ಖ್ಯಾತಿ ಪೋರ ನಿಶಾಂತ್‍ಗೆ ಸಲ್ಲಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗ್ರ್ಯಾಂಡ್ ಚಾಂಪಿಯನ್ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಭಾರತದ ಕೀರ್ತಿ ಪತಾಕೆಯನ್ನ ಎತ್ತಿ ಹಿಡಿದಿದ್ದಾನೆ.