ನವದೆಹಲಿ: ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಂಗಳೂರಿಗೆ (Bengaluru) ಬರುತ್ತಿದ್ದ ಏರ್ ಇಂಡಿಯಾ ವಿಮಾನ (Air India Flight) ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ದೆಹಲಿಯಿಂದ (New Delhi) ಬೆಂಗಳೂರಿಗೆ ಇಂದು (ಶುಕ್ರವಾರ) ಸಂಜೆ 6 ಗಂಟೆಗೆ ಏರ್ ಇಂಡಿಯಾ ವಿಮಾನ ಹೊರಟಿತ್ತು. ಈ ವೇಳೆ ವಿಮಾನದ ಎಸಿಯಲ್ಲಿ (ಹವಾನಿಯಂತ್ರಣ ಘಟಕ) ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ 6:38 ಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಇದನ್ನೂ ಓದಿ: ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್: ಹೊಸ ಬಾಂಬ್ ಸಿಡಿಸಿದ ವಕೀಲ ದೇವರಾಜೇಗೌಡ
175 ಪ್ರಯಾಣಿಕರೊಂದಿಗೆ ದೆಹಲಿಯಿಂದ ಬೆಂಗಳೂರಿಗೆ ವಿಮಾನ ಹೊರಟಿತ್ತು. ವಿಮಾನ ದೆಹಲಿಗೆ ಮರಳಿ ಸುರಕ್ಷಿತ ಲ್ಯಾಂಡಿಂಗ್ ಮಾಡಿದೆ.
ಪ್ರಯಾಣಿಕರು ಬೆಂಗಳೂರಿಗೆ ತೆರಳಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್‌ರಾಡಾರ್ 24 ರಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವಿಮಾನವನ್ನು A321 ಏರ್‌ಕ್ರಾಫ್ಟ್‌ನೊಂದಿಗೆ ನಿರ್ವಹಿಸಲಾಗಿದೆ. ಇದನ್ನೂ ಓದಿ: ಮೋದಿ, ಅವರ ಸಚಿವರು ವಿಮಾನಗಳಲ್ಲಿ ಫ್ರೀಯಾಗಿ ಓಡಾಡ್ತಾರೆ.. ಮಹಿಳೆ ಯಾಕೆ ಫ್ರೀ ಬಸ್ ಪ್ರಯಾಣ ಮಾಡಬಾರದು: ಕೇಜ್ರಿವಾಲ್ ಪ್ರಶ್ನೆ