– ಸ್ಫೋಟಕ್ಕೆ ಪ್ಲಾಸ್ಟಿಕ್ ಕವರ್ ಬಳಕೆ
ಬೆಂಗಳೂರು: ಇಡೀ ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸಿದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್ ಸ್ಫೋಟದ ಹಿಂದೆ ಐಸಿಸ್ ಉಗ್ರರ ಕೈವಾಡ ಇದೆಯಾ ಎಂಬ ಪ್ರಶ್ನೆ ಎದ್ದಿದೆ.
ಬಾಂಬ್ ಬ್ಲಾಸ್ಟ್ (Bengaluru Bomb Blast) ಆದ ಸ್ಥಳದಲ್ಲಿ ಸಿಕ್ಕ ವಸ್ತುಗಳ ಪರಿಶೀಲನೆ ನಡೆಸಿದಾಗ ಈ ಅನುಮಾನ ಮೂಡಿದೆ. ಮಂಗಳೂರು ಕುಕ್ಕರ್ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮಾಡಿದ್ದು ಇದೇ ಐಸಿಸ್ ಉಗ್ರರು ಎಂಬುದು ಬಯಲಾಗಿತ್ತು.
Advertisement
Advertisement
ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಈ ಹಿಂದೆ ನಡೆದಿದ್ದ ಸ್ಪೋಟದ ಮಾದರಿಯಲ್ಲೇ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿದೆ. ಈ ಸ್ಪೋಟದಲ್ಲಿ ಬಳಕೆಯಾಗಿರುವ ಡಿಟೋನೇಟರ್, ಬ್ಯಾಟರಿ ಸೇರಿ ಹಲವು ವಸ್ತುಗಳು ಕುಕ್ಕರ್ ಬ್ಲಾಸ್ಟ್ ನಂತೆಯೇ ಪತ್ತೆಯಾಗಿದೆ. ಹೀಗಾಗಿ ಐಸಿಸ್ ಸಂಘಟನೆ ಈ ಕೃತ್ಯದ ಹಿಂದೆ ಇರುವ ಶಂಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ – ಓರ್ವ ವಶಕ್ಕೆ
Advertisement
Advertisement
ಪ್ಲಾಸ್ಟಿಕ್ ಕವರ್ ಬಳಕೆ: ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಟಿಫನ್ಸ್ ಬಾಕ್ಸ್ ಬದಲಿಗೆ ಪ್ಲಾಸ್ಟಿಕ್ ಕವರ್ ಬಳಕೆ ಮಾಡಲಾಗಿದೆ. ಗಟ್ಟಿಯಾದ ಪ್ಲಾಸ್ಟಿಕ್ ಕವರ್ ನಲ್ಲಿ ಶಂಕಿತ ಎರಡು ಕಂಟೇನರ್ ಮಾಡಿದ್ದ. ಈ ಎರಡೂ ಕಂಟೇನರ್ ಬ್ಯಾಗ್ ನ ಒಳಗೆಯೇ ಇತ್ತು. ಒಂದಾದ ಬಳಿಕ ಮತ್ತೊಂದು ಸ್ಫೋಟವಾಗುವಂತೆ ಟೈಂ ಸೆಟ್ಟಿಂಗ್ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: Public TV Exclusive: ಬೆಂಗ್ಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಶಂಕಿತನ ಫೋಟೋ ಲಭ್ಯ
ಕಪ್ಪು ಕಲರ್ ಬ್ಯಾಗ್ ಅಲ್ಲಿಯೇ ಎರಡು ಕಂಟೇನರ್ ಇಟ್ಟಿದ್ದ. ಇದು ಸ್ಫೋಟಗೊಂಡು ಸಂಪೂರ್ಣವಾಗಿ ಮೇಲ್ಛಾವಣಿಯ ಕಡೆಗೆ ಚದುರಿತ್ತು. ಮೇಲ್ಛಾವಣಿಗೆ ನಟ್, ಬೋಲ್ಟ್ ಗಳೆಲ್ಲ ಹೊಡೆದಿದ್ದವು. ಸುತ್ತಮುತ್ತ ಚದುರದೇ ಇದ್ದ ಕಾರಣ ಭಾರೀ ಅಪಾಯ ತಪ್ಪಿದೆ. ಟಿಫನ್ ಬಾಕ್ಸ್ ನ ಯಾವುದೇ ಮಾದರಿಯೂ ಪತ್ತೆಯಾಗಿಲ್ಲ. ಶಂಕಿತ ಹೊರನಡೆದ ಒಂದು ಗಂಟೆ ಅವಧಿಯಲ್ಲೇ ಬ್ಲಾಸ್ಟ್ ಆಗಿದೆ.