ಬೆಂಗಳೂರು: ನಮ್ಮನ್ನ ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಒತ್ತಾಯಿಸಿ ನಾಳೆ ಬೃಹತ್ ಉಪವಾಸ ಸತ್ಯಾಗ್ರಹವನ್ನ ಬಿಎಂಟಿಸಿ ನೌಕರರು ಹಮ್ಮಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಈ ಬಜೆಟ್ ನಲ್ಲಿ ಸಾರಿಗೆ ನೌಕರರನ್ನ ರಾಜ್ಯ ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದಾರೆ. ನಾಳೆ ಬೆಳಗ್ಗೆ 7 ರಿಂದ ಸಂಜೆ 5ರ ತನಕ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹವನ್ನ ಮಾಡಲಿದ್ದಾರೆ.
Advertisement
Advertisement
ಈ ಉಪವಾಸ ಸತ್ಯಾಗ್ರಹದಲ್ಲಿ ಬಿಎಂಟಿಸಿ ನೌಕರರು ಮತ್ತು ಕುಟುಂಬದವರು ಭಾಗಿಯಾಗಲಿದ್ದು ಸರಿಸುಮಾರು 8 ಸಾವಿರ ನೌಕರರು ಮತ್ತು ಕುಟುಂಬಸ್ಥರು ಸೇರಿ ಉಪವಾಸ ಸತ್ಯಾಗ್ರಹವನ್ನ ಮಾಡಲಿದ್ದಾರೆ.
Advertisement
ವಾರದ ರಜೆ ಇರುವ ನೌಕರರು, ಪಾಳಿ ಮುಗಿದ ನೌಕರರು ಮತ್ತು ಕುಟಂಬದವರು ಪಾಲ್ಗೊಳ್ಳುತ್ತಾರೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಬಿಎಂಟಿಸಿ ಬಸ್ ಸಂಚಾರ ಮಾಡಲಿದೆ.
Advertisement