ಬೆಂಗಳೂರು: ಪ್ರಯಾಣಿಕರೇ ಬಿಎಂಟಿಸಿ ಬಸ್ ಹತ್ತೋ ಮುನ್ನ ಹುಷಾರಾಗಿರಿ. ಯಾಕೆಂದರೆ ಇಷ್ಟು ದಿನ ಪ್ರಯಾಣಿಕರ ಸುರಕ್ಷಾ ಕವಚದಂತಿದ್ದ ಬಿಎಂಟಿಸಿ ಬಸ್ಸುಗಳು ಈಗ ಜೀವ ತೆಗೆಯುವ ಬಸ್ ಗಳಾಗುತ್ತಿವೆ. ಎಲ್ಲೆಂದರಲ್ಲೇ ಬ್ರೇಕ್ ಫೆಲ್ಯೂರ್ ಆಗಿ ದೊಡ್ಡ ಅವಾಂತರಗಳೇ ಸೃಷ್ಟಿಯಾಗುತ್ತಿವೆ. ಹೀಗಾಗಿ ಬಿಎಂಟಿಸಿ ಬಸ್ ಗಳು ಪ್ರಯಾಣಿಕರಿಗೆ ಎಷ್ಟು ಸೇಫ್ ಅನ್ನೋದರ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ.
Advertisement
ಹೌದು. ರಾಜ್ಯ ರಾಜಧಾನಿಯಲ್ಲಿ ಬಿಎಂಟಿಸಿ ಬಸ್ ಗಳ ಆರ್ಭಟಕ್ಕೆ ಪ್ರಯಾಣಿಕರು ಬೆಚ್ಚಿ ಬೀಳುತ್ತಿದ್ದಾರೆ. ಇತ್ತೀಚೆಗೆ ನಡೆದ ಸಾಲು ಸಾಲು ಬಿಎಂಟಿಸಿ ಬಸ್ ಅಪಘಾತಗಳೇ ಪ್ರಯಾಣಿಕರ ಈ ಆತಂಕಕ್ಕೆ ಕಾರಣವಾಗಿದೆ.
Advertisement
ಬಿಎಂಟಿಸಿ ಬಸ್ ಗಳು ಪ್ರಯಾಣಿಕರಿಗೆ ಎಷ್ಟು ಸೇಫ್ ಅಂತ ಪಬ್ಲಿಕ್ ಟಿವಿ ತಂಡ ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ನಿಂದ ರಿಯಾಲಿಟಿ ಚೆಕ್ ಗೆ ಇಳಿದಿತ್ತು. ಈ ವೇಳೆ ಸತ್ಯ ಬಯಲಾಗಿದೆ. ಬಸ್ ಡ್ರೈವರ್ ತುಂಬಾನೇ ಕಷ್ಟದಿಂದ ಗೇರ್ ಚೇಂಜ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಕುಳಿತುಕೊಳ್ಳಲು ಸರಿಯಾದ ಸೀಟ್ ವ್ಯವಸ್ಥೆ ಕೂಡ ಇಲ್ಲ. ಇಂತಹ ಬಸ್ಸಿನಲ್ಲಿಯೇ ನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ.
Advertisement
Advertisement
ಜಯನಗರದಲ್ಲಿ ಶನಿವಾರ ನಡೆದ ಬಿಎಂಟಿಸಿ ಬಸ್ ಅಪಘಾತದಿಂದ ಜನ ಬಿಎಂಟಿಸಿ ಬಸ್ ಗಳ ಸುರಕ್ಷತೆ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಡಿಪೋ ಸಿಬ್ಬಂದಿಯ ನಿರ್ಲಕ್ಷ್ಯವೇ ಬಸ್ ಅಪಘಾತಗಳಿಗೆ ಕಾರಣ ಅಂತ ಕಿಡಿಕಾರುತ್ತಿದ್ದಾರೆ. ಅಲ್ಲದೆ ಕಳಪೆ ಕಂಡಿಷನ್ ಇರೋ ಬಸ್ ಗಳನ್ನ ಡಿಪೋ ವರ್ಕ್ ಶಾಪ್ ನಲ್ಲಿ ರೆಡಿ ಮಾಡಲಾಗುತ್ತದೆ. ಅಲ್ಲಿ ಬಸ್ ಗಳ ರಿಪೇರಿ ಕೆಲಸ ನಡೆಯುತ್ತಿರುವುದು ಕೂಡ ರಿಯಾಲಿಟಿ ಚೆಕ್ ವೇಳೆ ಬಯಲಾಗಿದೆ.
ನಂತರ ತಂಡ ಮಾರ್ಕೆಟ್ ನಿಂದ ಮಾಗಡಿ ರೋಡ್ ಬಸ್ ಹತ್ತಿ ರಿಯಾಲಿಟಿ ಚೆಕ್ ನಡೆಸಿತ್ತು. ಅದು ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಬಿನ್ನಿಮಿಲ್ ವರೆಗೆ, ಆ ಬಸ್ಸಿನ ಎಲ್ಲಾ ಪಾರ್ಟ್ ಗಳು ಆಗಲೋ ಈಗಲೋ ಬಿಳೋ ಸ್ಥಿತಿಯಲ್ಲಿತ್ತು. ಅಷ್ಟರಮಟ್ಟಿಗೆ ಎಲ್ಲಾ ಪಾರ್ಟ್ ಗಳು ಡ್ಯಾಮೇಜ್ ಆಗಿದ್ದವು. ಒಟ್ಟಿನಲ್ಲಿ ಇಂತಹ ಬಸ್ ಗಳಲ್ಲಿ ಸಂಚಾರ ಮಾಡಿದ್ರೆ ಅಪಾಯ ಗ್ಯಾರಂಟಿ. ಹೀಗಾಗಿ ಸೇಫ್ಟಿ ಬಿಎಂಟಿಸಿ ಬಸ್ ಹತ್ತುವ ಮುನ್ನ ಹುಷಾರಾಗಿರಿ.