ಬೆಂಗಳೂರು: ಬಸ್ ಪ್ರಯಾಣಿಕರಿಗೆ ಶೀಘ್ರವೇ ಶಾಕಿಂಗ್ ನ್ಯೂಸ್ ಒಂದು ಕಾದಿದೆ. ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ. ದರ ಹೆಚ್ಚಳ ಸಂಬಂಧ ರಾಜ್ಯ ಸಾರಿಗೆ ನಿಗಮಗಳ ಪರಿಶೀಲನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಬಜೆಟ್ ಅಧಿವೇಶನಕ್ಕೂ ಮೊದಲೇ ಪರಿಷ್ಕೃತ ದರ ಜಾರಿಯಾಗೋ ಸಾಧ್ಯತೆ ಇದೆ.
Advertisement
ಬಿಎಂಟಿಸಿ, ಕೆಎಸ್ಆರ್‌ಟಿಸಿ ಸೇರಿದಂತೆ ಎಲ್ಲಾ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ದಿನೇ ದಿನೇ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗುತ್ತಿದ್ದು, ನಷ್ಟ ಭರಿಸಬೇಕಾದ್ರೆ ದರ ಹೆಚ್ಚಳ ಸಾರಿಗೆ ಇಲಾಖೆಗೆ ಅನಿವಾರ್ಯವಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಹೊರೆಯಾಗದಂತೆ ದರ ಹೆಚ್ಚಳ ಮಾಡಲು ಇಲಾಖೆ ನಿರ್ಧಾರ ಮಾಡಿದ್ದು, ಶೀಘ್ರವೇ ದರ ಹೆಚ್ಚಳ ಆದೇಶ ಹೊರ ಬೀಳುವ ಸಾಧ್ಯತೆ ಇದೆ.
Advertisement
Advertisement
ಕಳೆದ 5 ವರ್ಷಗಳಿಂದ ಬಸ್ ಟಿಕೆಟ್ ದರ ಏರಿಕೆ ಮಾಡಿಲ್ಲ. ಸಮ್ಮಿಶ್ರ ಸರ್ಕಾರ ಇದ್ದಾಗ ಸಿಎಂ ಕುಮಾರಸ್ವಾಮಿ ಮುಂದೆ ಶೇ.15ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಬಂದಿತ್ತು. ಚುನಾವಣೆ, ಜನರ ವಿರೋಧ ಮಾಡಬಹುದು ಅನ್ನೋ ನಿಟ್ಟಿನಲ್ಲಿ ಕುಮಾರಸ್ವಾಮಿ ಸರ್ಕಾರ ದರ ಏರಿಕೆಗೆ ಅನುಮತಿ ನೀಡಿರಲಿಲ್ಲ. ಅಂದಿನಿಂದ ಇಂದಿನವರೆಗೂ ದರ ಹೆಚ್ಚಳದ ಬಗ್ಗೆ ಚರ್ಚೆ ಆಗುತ್ತಾನೇ ಇತ್ತು. ಈಗ ಮತ್ತೆ ಅಧಿಕಾರಿಗಳು ದರ ಏರಿಕೆ ಪ್ರಸ್ತಾಪ ಮಾಡಿದ್ದು, ಇಲಾಖೆ ಕೂಡ ದರ ಹೆಚ್ಚಳಕ್ಕೆ ಸಕಾರಾತ್ಮಕ ಮವಾಗಿ ಸ್ಪಂದನೆ ನೀಡಿದೆ. ಸಿಎಂ ಯಡಿಯೂರಪ್ಪರ ಅನುಮತಿ ಸಿಕ್ಕ ಕೂಡಲೇ ಟಿಕೆಟ್ ದರ ಹೆಚ್ಚಳವಾಗಲಿದ್ದು, ಬಜೆಟ್ ಮುನ್ನವೇ ಜನರಿಗೆ ಟಿಕೆಟ್ ದರ ಹೆಚ್ಚಳವಾದ್ರು ಆಶ್ಚರ್ಯ ಇಲ್ಲ.