ಬೆಂಗಳೂರು: ಬಾಕ್ಸ್ ಪುಶಿಂಗ್ ತಂತ್ರಜ್ಞಾನ (Box-Pushing technology) ಬಳಸಿ ದೇಶದಲ್ಲೇ ಮೊದಲ ಬಾಕ್ಸ್ ಆಕಾರದ ಸುರಂಗ ನಿರ್ಮಾಣ ಮಾಡಿ ನಮ್ಮ ಮೆಟ್ರೋ (Namma Metro) ಯಶಸ್ವಿಯಾಗಿದೆ.
ಇಲ್ಲಿಯವರೆಗೂ ಮೆಟ್ರೋ ಅಂಡರ್‍ಗ್ರೌಂಡ್ ಮಾರ್ಗಕ್ಕೆ ವೃತ್ತಾಕಾರದ ಸುರಂಗ ನಿರ್ಮಿಸುತ್ತಿತ್ತು. ಇದೀಗ ಬಿಎಂಆರ್‌ಸಿಎಲ್ (BMRCL) ನೂತನ ತಂತ್ರಜ್ಞಾನ ಬಳಸಿ ಬಾಕ್ಸ್ ಆಕಾರದಲ್ಲಿ ಸುರಂಗದ ಕಾಮಗಾರಿ ನಡೆಸಿದೆ. ನಾಗವಾರದ ಔಟರ್ ರೋಡ್‍ನ ಮೇಲ್ಸೇತುವೆ ಕೆಳಗೆ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ 77 ಮೀಟರ್ ಅಗಲದ ಬಾಕ್ಸ್ ಪುಶಿಂಗ್ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ.
Advertisement
Advertisement
ಕಾಮಗಾರಿಯಲ್ಲಿ ಬಾಕ್ಸ್ ಪುಶಿಂಗ್ ತಂತ್ರಜ್ಞಾನ ಯಶಸ್ವಿಯಾಗಿರುವ ಬಗ್ಗೆ ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
Advertisement