ಚಿಕ್ಕಮಗಳೂರಿನಲ್ಲಿ ಮದ್ವೆ, ಬೆಂಗಳೂರಿನಲ್ಲಿ ಆರತಕ್ಷತೆ – ಭಾವಿ ಪತ್ನಿ ಜೊತೆ ಕಾಣಿಸಿಕೊಂಡ ತೇಜಸ್ವಿ ಸೂರ್ಯ

Public TV
2 Min Read
Tejasvi Surya Sivasri Skandaprasad

ಬೆಂಗಳೂರು: ಶೀಘ್ರವೇ ಹಸೆಮಣೆ ಏರಲಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಮದುವೆ ದಿನಾಂಕ ನಿಗದಿಯಾಗಿದೆ.

ಚಿಕ್ಕಮಗಳೂರು ಮೂಲದ ತೇಜಸ್ವಿ ಸೂರ್ಯ ಅವರ ಮದುವೆ ಮಾರ್ಚ್ 1 ಮತ್ತು 2 ರಂದು ಚಿಕ್ಕಮಗಳೂರಿನಲ್ಲಿ (Chikkamagaluru) ನಡೆಯಲಿದ್ದರೆ ಮಾರ್ಚ್  9 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ (Palace Grounds Bengaluru) ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದೆ.

Tejasvi Surya to wed classical singer Sivasri Skandaprasad

ಮದುವೆಗೂ ಮೊದಲೂ ತಮ್ಮ ಭಾವಿ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ (Sivasri Skandaprasad) ಜೊತೆ ತೇಜಸ್ವಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಅವರು ಜೊತೆಯಾಗಿ ಕಾಣಿಸಿಕೊಂಡು ಶ್ರೀ ಶ್ರೀ ರವಿಶಂಕರ್ ಅವರ ಆಶೀರ್ವಾದ ಪಡೆದಿದ್ದಾರೆ.

ಶಿವಶ್ರೀ ಅವರು ಚೆನ್ನೈ (Chennai) ಮೂಲದ ಹೆಸರಾಂತ ಗಾಯಕಿ, ಭರತನಾಟ್ಯ ಪ್ರವೀಣೆ ಹಾಗೂ ಬಿಟೆಕ್ ಪದವೀಧರೆಯಾಗಿದ್ದಾರೆ. ಅಯೋಧ್ಯೆ ರಾಮಮಂದಿರ (Rammandira) ಲೋಕಾರ್ಪಣೆ ಸಂದರ್ಭದಲ್ಲಿ ಪೂಜಿಸಲೆಂದೇ ಹೂಗಳ ತಂದೆ ಹಾಡುವ ಮೂಲಕ ಪ್ರಧಾನಿ ಮೋದಿಯವರ (PM Narendra Modi) ಮೆಚ್ಚುಗೆಗೆ ಶಿವಶ್ರೀ ಪಾತ್ರರಾಗಿದ್ದರು.

 

ಶಿವಶ್ರೀ ಅವರು ಹಾಡಿದ್ದ ʼಪೂಜಿಸಲೆಂದೆ..ಹೂಗಳ ತಂದೆʼ ಹಾಡನ್ನ ಪ್ರಧಾನಿ ಮೋದಿ ಹೊಗಳಿದ್ದರು. ಕಲ್ಪನಾ ಅವರ ಎರಡು ಕನಸು ಸಿನಿಮಾದ ಪೂಜಿಸಲೆಂದೆ..ಹೂಗಳ ತಂದೆ..ತೆರೆಯೋ ಬಾಗಿಲನು ರಾಮಾ..ʼ ಎಂಬ ಹಾಡನ್ನು ಶಿವಶ್ರೀ ತಮ್ಮದೇ ಶೈಲಿಯಲ್ಲಿ, ಮಧುರವಾಗಿ ಹಾಡಿದದು ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಯೂಟ್ಯೂಬ್‌ನಲ್ಲಿ ಸುಮಾರು 4.70 ಲಕ್ಷ ಈ ಹಾಡು ವ್ಯೂ ಕಂಡಿದೆ.

ತೇಜಸ್ವಿ ಅವರಂತೆ ಶಿವಶ್ರೀ ಅವರು ಹರಿಕಥೆ, ಸೈಕ್ಲಿಂಗ್, ವಾಕಥಾನ್‌ನಲ್ಲಿ ಆಸಕ್ತಿ ಹೊಂದಿದ್ದಾರೆ ತೇಜಸ್ವಿ ಮತ್ತು ಶಿವಶ್ರೀ  ಕೆಲ ವರ್ಷಗಳಿಂದ ಪರಿಚಯ ಹೊಂದಿದ್ದಾರೆ. ಈ ಹಿಂದೆ 2021ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ತೇಜಸ್ವಿ ಸೂರ್ಯ ಭಾಗಿಯಾಗಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಿವಶ್ರೀಯವರನ್ನು ಸನ್ಮಾನಿಸಿದ್ದರು. ಈ ಫೋಟೋಗಳನ್ನ ಶಿವಶ್ರೀ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Share This Article