ಬೆಂಗಳೂರು: ಅಂದು ಮನೆ, ಹೆಂಡ್ತಿ-ಮಕ್ಕಳ ಬಿಟ್ಟು ಮುಂಬೈನಲ್ಲಿದ್ರು. ಸಮ್ಮಿಶ್ರ ಸರ್ಕಾರ ಬೀಳಿಸಿಯೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಅವರೆಲ್ಲ ಇಂದು ಅಧಿಕಾರಕ್ಕೆ ತಂದ ಬಿಜೆಪಿ ಮೇಲೆ ಕೊತಕೊತ ಕುದಿಯುತ್ತಿದ್ದಾರೆ. ಬಿಜೆಪಿ ನಡೆಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಸರ್ಕಾರ ರಚನೆಗೆ ನಮ್ಮ ಅಗತ್ಯತೆ ಇತ್ತು, ಈಗ ಕ್ಯಾರೇ ಅಂತಿಲ್ಲ ಎಂದು ಮಿತ್ರಮಂಡಳಿ ಸದಸ್ಯರು ಆಕ್ರೋಶಗೊಂಡಿದ್ದಾರೆ.
ಅಂದಹಾಗೆ ಮಿತ್ರಮಂಡಳಿಯ ವಾದ ಸಿಂಪಲ್ ಆಗಿದೆ. ಗೆದ್ದ 24 ಗಂಟೆಯಲ್ಲಿ ಮಂತ್ರಿ ಮಾಡ್ತೀವಿ ಎಂದು ಯಡಿಯೂರಪ್ಪ ಹೇಳಿದ್ದರು. 24 ಗಂಟೆಯಲ್ಲ, 24 ದಿನ ಕಳೆದ್ರೂ ಮಂತ್ರಿನೂ ಇಲ್ಲ, ಕಾರೇ ಅಂತಿಲ್ಲ. ಆದರೆ ಕೊಟ್ಟ ಮಾತನ್ನ ತಪ್ಪಿ ನಡೆಯೆನು ಅಂತಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ, ಮಂತ್ರಿ ಮಾಡಿ ಅಂದ್ರೆ ಹೈಕಮಾಂಡ್ ಕಡೆ ಕೈ ತೋರಿಸ್ತಾರೆ. ಹೀಗಾದ್ರೆ ನಾವು ದಾರಿತಪ್ಪಿದ ಮಕ್ಕಳಾದಂತೆ ಅಲ್ವ ಅಂತ ಮಿತ್ರಮಂಡಳಿ ಸದಸ್ಯರು ಕೊತ ಕೊತ ಕುದಿಯುತ್ತಿದ್ದಾರೆ.
Advertisement
Advertisement
ಮಿತ್ರಮಂಡಳಿ ಗೋಳಾಟದ ಬಗ್ಗೆ ಯಡಿಯೂರಪ್ಪ ಮಾತ್ರ ಮಾತಾಡ್ತಾರೆ, ಬಿಜೆಪಿ ಇತರರು ಕ್ಯಾರೇ ಅಂತಿಲ್ಲ. ಇದು ಸಹಜವಾಗಿಯೇ ಬಿಜೆಪಿ ವಿರುದ್ಧ ಆಕ್ರೋಶ ಸ್ಫೋಟಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ. ಅಸಮಾಧಾನಗೊಂಡಿರುವ ಮಿತ್ರಮಂಡಳಿಯ ಸದಸ್ಯರಲ್ಲಿ ಜಾರಕಿಹೊಳಿಯಂತೂ ಯಾರ ಜೊತೆಯೂ ಮಾತನಾಡದೇ ಫುಲ್ ಸೈಲೈಂಟ್ ಆಗಿ ವೈಲೆಂಟ್ ಆಗಿದ್ದಾರಂತೆ. ಎಸ್.ಟಿ ಸೋಮಶೇಖರ್, ಬಿ.ಸಿ ಪಾಟೀಲ್, ವಿಶ್ವನಾಥ್, ಎಂ.ಟಿ.ಬಿ ನಾಗರಾಜ್ ಕೂಡ ಅಸಮಾಧಾನಗೊಂಡಿದ್ದು, ಮಿತ್ರಮಂಡಳಿ ಅಸಮಾಧಾನಕ್ಕೆ ತೇಪೆ ಹಚ್ಚಲು ಯಡಿಯೂರಪ್ಪ ಟೀಂ ಮಾಡ್ತಿದೆ ಸರ್ಕಸ್ ಮಾಡ್ತಿದೆ.