ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು 100 ದಿನದ ಸಂಭ್ರಮ. ಈ ಮಧ್ಯೆ ಕೋರ್ಟ್ ತೀರ್ಪಿನ ನಿರೀಕ್ಷೆಯಲ್ಲಿದ್ದ ಅನರ್ಹ ಶಾಸಕರಿಗೆ ಇನ್ನೊಂದು ರೀತಿಯ ಸಮಸ್ಯೆ ಎದುರಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.
ನವೆಂಬರ್ 4ರಂದು ಕೋರ್ಟ್ ತೀರ್ಪು ಅನರ್ಹ ಶಾಸಕರ ಪರಾವಾಗಿ ಬರುತ್ತದೆ. ಶೇ.99 ರಷ್ಟು ಅನರ್ಹರ ಪರವಾಗಿಯೆ ತೀರ್ಪು ಬರುತ್ತದೆ ಅನ್ನೋ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ ಹೇಳಿಕೆ ವಿರುದ್ಧ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಈ ಮೂಲಕ ಒಂದೇ ಕಲ್ಲಿಗೆ 2 ಹಕ್ಕಿ ಹೊಡೆಯಲು ಕೈ ಪಾಳಯ ಮುಂದಾಗಿದೆ.
ಯಡಿಯೂರಪ್ಪನವರ ಕೋರ್ ಕಮಿಟಿಯ ಅನರ್ಹ ಶಾಸಕರ ಪರವಾದ ತೀರ್ಪಿನ ಮಾತನ್ನು ಸುಪ್ರೀಂಕೋರ್ಟಿಗೆ ಕೊಂಡೊಯ್ಯೋದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಆ ಮೂಲಕ ಅನರ್ಹರ ಭವಿಷ್ಯವನ್ನ ಇನ್ನಷ್ಟು ಅಡ್ಡ ಕತ್ತರಿಗೆ ಸಿಲುಕಿಸೋದು ಕಾಂಗ್ರೆಸ್ ಪ್ಲಾನ್ ಆಗಿದೆ. ಇದನ್ನೂ ಓದಿ: ಅನರ್ಹರು ಇಲ್ಲದಿದ್ದರೆ ಸರ್ಕಾರವೇ ಇರುತ್ತಿರಲಿಲ್ಲ, ನನ್ನನ್ನು ನಂಬಿ ಬಂದಿದ್ದಾರೆ – ನಾಯಕರ ವಿರುದ್ಧ ಬಿಎಸ್‍ವೈ ಬೇಸರ
ಒಟ್ಟಿನಲ್ಲಿ ಕಾಂಗ್ರೆಸ್ಸಿನ ಈ ಪ್ಲಾನ್ ಯಶಸ್ವಿಯಾಗುತ್ತಾ, ಯಡಿಯೂರಪ್ಪರ ಮಾತು ಕಾಂಗ್ರೆಸ್ ಪಾಲಿಗೆ ಬ್ರಹ್ಮಾಸ್ತ್ರ ಆಗುತ್ತಾ ಅಥವಾ ಅನರ್ಹರು ಇದೇ ಆಧಾರದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರಾ ಅನ್ನೋದು ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ:ಅನರ್ಹರ ಅರ್ಜಿ ವಿಚಾರಣೆ ಪೂರ್ಣ – ಕಾಂಗ್ರೆಸ್, ಚುನಾವಣಾ ಆಯೋಗದ ವಾದ ಏನಿತ್ತು?