– ಇಂದೇ ಎಲ್ಲ ಫೈನಲ್ ಆಗುತ್ತಾ?
ಬೆಂಗಳೂರು: ಸಂಪುಟ ವಿಸ್ತರಣೆಗೆ ದೆಹಲಿ ವರಿಷ್ಠರಿಂದ ನಿನ್ನೆಯಷ್ಟೇ ಗ್ರಿನ್ ಸಿಗ್ನಲ್ ಪಡೆದುಕೊಂಡು ಬಂದಿರುವ ಸಿಎಂ ಬಿಎಸ್‍ವೈ, ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಹೈಕಮಾಂಡ್ 10+3 ಸೂತಕ್ಕೆ ಒಪ್ಪಿಗೆ ಕೊಟ್ಟಿರುವುದರಿಂದ ಕೆಲವರ ಮೊನವೊಲಿಕೆಯ ಜವಾಬ್ದಾರಿಯನ್ನು ಸ್ವತಃ ಸಿಎಂ ಬಿಎಸ್‍ವೈ ಅವರೇ ಹೊತ್ತುಕೊಂಡಿದ್ದಾರೆ. ಹೀಗಾಗಿ ಇಂದು ಮಿತ್ರಮಂಡಳಿ ಮತ್ತು ಪಕ್ಷದ ಕೆಲವರನ್ನ ಸಿಎಂ ಬಿಎಸ್‍ವೈ ತಮ್ಮ ನಿವಾಸಕ್ಕೆ ಕರೆಸಿಕೊಂಡು ಚರ್ಚೆ ನಡೆಸುವ ಸಾಧ್ಯತೆ ಇದೆ.
ಸಿಎಂ ಸಹ ದೆಹಲಿಯಲ್ಲಿ ಕೆಲವರೊಂದಿಗೆ ಚರ್ಚೆ ನಡೆಸಿ ಸಂಪುಟ ವಿಸ್ತರಣೆ ಮಾಡ್ತೀನಿ ಅಂದಿದ್ರು. ಅದರಂತೆ, ಸಿಎಂ ಬಿಎಸ್‍ವೈ ಅವರೇ ನೂತನ ಶಾಸಕರನ್ನು ಮತ್ತು ಪಕ್ಷದ ಕೆಲವರನ್ನ ತಮ್ಮ ಮನೆಗೆ ಕರೆಸಿಕೊಂಡು ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ಸಭೆ ಬೇರೆ ಸ್ಥಳದಲ್ಲೂ ನಡೆಯುವ ಸಾಧ್ಯತೆಯೂ ಇದೆ. ಸಾಕಷ್ಟು ಕುತೂಹಲ ಇರೋದು ಸಿಎಂ ನಿರ್ದಿಷ್ಟವಾಗಿ ಯಾರನ್ನೆಲ್ಲ ಮನವೋಲಿಕೆ ಮಾಡ್ತಾರೆ ಅನ್ನೋದು. ನೂತನ ಶಾಸಕರು ಮತ್ತು ಮೂಲ ಬಿಜೆಪಿಯರ ಪೈಕಿ ಕೆಲ ನಾಯಕರನ್ನ ಸಿಎಂ ಮನವೊಲಿಸಬೇಕಿದೆ. ಸಿಎಂ ಬಿಎಸ್‍ವೈ ಈ ಸವಾಲನ್ನ ಹೇಗೆ ನಿಭಾಯಿಸಲಿದ್ದಾರೆ ಅನ್ನೋದು ಸದ್ಯದ ಕುತೂಹಲ.
10+3 ಸೂತ್ರಕ್ಕೆ ಮಿತ್ರಮಂಡಳಿ ಒಪ್ತಾರಾ ಇಲ್ವಾ ಅನ್ನೋದು ಸ್ಪಷ್ಟವಿಲ್ಲ. ಆದರೆ 11 ಜನರ ಪೈಕಿ ಒಬ್ಬರನ್ನು ಕೈಬಿಡುವ ಪ್ರಸ್ತಾಪ ಕುರಿತು ಮಿತ್ರಮಂಡಳಿ ಶಾಸಕರನ್ನು ಮನವೊಲಿಸಲೇಬೇಕಾದ ಅನಿವಾರ್ಯತೆ ಸಿಎಂಗಿದೆ. ಇದರ ಜೊತೆ ಪಕ್ಷದ ಮೂಲ ಶಾಸಕರಲ್ಲಿ 10ಕ್ಕೂ ಹೆಚ್ಚು ಮಂದಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈ ಸಂಪುಟ ವಿಸ್ತರಣೆಯಲ್ಲಿ ಕೇವಲ ಮೂವರ ಸೇರ್ಪಡೆಗೆ ನಿರ್ಧರಿಸಲಾಗಿದೆ. ಹೀಗಾಗಿ ಆ ಮೂವರ ಆಯ್ಕೆ ಸಿಎಂಗೆ ಕಗ್ಗಂಟಾಗಲಿದೆ. ಸದ್ಯ ಉಮೇಶ್ ಕತ್ತಿ ಮತ್ತು ಅರವಿಂದ ಲಿಂಬಾವಳಿಯವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಬ್ಬ ಶಾಸಕ ಯಾರು ಅನ್ನೋದು ಕುತೂಹಲ ಕೆರಳಿಸಿದೆ. ಮೂವರಿಗೆ ಮಾತ್ರ ಸಚಿವಗಿರಿ ಕೊಟ್ಟರೆ ಉಳಿದವರ ಅಸಮಾಧಾನ ತಣಿಸುವ ಕೆಲಸವನ್ನು ಸಿಎಂ ಅವರೇ ಮಾಡಬೇಕಿದೆ. ಹೀಗಾಗಿ ಇಂದಿನ ಸಭೆಯಲ್ಲಿ ಬಿಕ್ಕಟ್ಟು ಪೂರ್ಣವಾಗಿ ಶಮನ ಆಗುತ್ತಾ ಅನ್ನೋದೇ ಪ್ರಶ್ನೆಯಾಗಿದೆ.