ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಪರದಾಡುತ್ತಿದ್ದಾರೆ. ಮಿತ್ರಮಂಡಳಿಯ ಒತ್ತಡ, ಹೈಕಮಾಂಡ್ ವಿಳಂಬದಿಂದ ಸಂಕಟದಲ್ಲಿದ್ದಾರೆ ಯಡಿಯೂರಪ್ಪ. ಧರ್ಮಸಂಕಟದಲ್ಲಿರುವ ಯಡಿಯೂರಪ್ಪ ಈಗ ಹೈಕಮಾಂಡ್ ಮುಂದೆ ಸಮಾಧಾನ ಸೂತ್ರ ಮಂಡನೆಗಾಗಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಮಿತ್ರಮಂಡಳಿ ಒಪ್ಪಿದ್ರೆ ಮಾತ್ರ ಆ ಸಮಾಧಾನ ಸೂತ್ರ ಸಕ್ಸಸ್ ಆಗೋದು ಅನ್ನೋದು ಹೊಸ ಲೆಕ್ಕಚಾರ.
Advertisement
ಪ್ಲೀಸ್ ಒಪ್ಪಿಕೊಂಡು ಬಿಡಿ.. ಇದು ಯಡಿಯೂರಪ್ಪ ಲಾಸ್ಟ್ ರಿಕ್ವೆಸ್ಟ್ ಗೇಮ್. ವಿದೇಶದಿಂದ ಇಂದು ವಾಪಸ್ ಆಗಿರುವ ಯಡಿಯೂರಪ್ಪ, ನಾಳೆ ಮಿತ್ರಮಂಡಳಿ ಮುಂದೆ ರಹಸ್ಯವಾಗಿ ಸಂಧಾನ ಸಭೆ ನಡೆಯುವ ಸಾಧ್ಯತೆ ಇದೆ. ಸಮಾಧಾನ ಸೂತ್ರ ಒಪ್ಪಿಸುವ ಮೀಟಿಂಗ್ ಕುತೂಹಲ ಮೂಡಿಸಿದೆ. ಯಡಿಯೂರಪ್ಪ 9+3=12 ಸಮಾಧಾನದ ಸೂತ್ರ ಪ್ಲಾನ್ ಮಾಡಿದ್ದಾರೆ. ಗೆದ್ದವರಿಗೆ 9 ಸಚಿವ ಸ್ಥಾನ, ಮೂಲ ಬಿಜೆಪಿಗರಿಗೆ 3 ಸಚಿವ ಸ್ಥಾನ ಒಟ್ಟು ಸದ್ಯ 12 ಸಚಿವ ಸ್ಥಾನ ಮಾತ್ರ ತುಂಬಲು ಯಡಿಯೂರಪ್ಪ ಸೂತ್ರದ ಪ್ಲಾನ್. ಜೂನ್ ಬಳಿಕ ಉಳಿದ 4 ಸ್ಥಾನಗಳನ್ನು ತುಂಬುವ ಸಮಾಧಾನದ ಸೂತ್ರ ರಚಿಸಿರುವ ಯಡಿಯೂರಪ್ಪ ಸಕ್ಸಸ್ ಆಗ್ತಾರಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.
Advertisement
Advertisement
ಆದರೆ ಯಡಿಯೂರಪ್ಪ ಸಮಾಧಾನದ ಸೂತ್ರಕ್ಕೆ ಮಿತ್ರಮಂಡಳಿ ಸಹಕಾರ ಕೊಟ್ಟು ಒಪ್ಪಿಗೆ ಕೊಡುತ್ತಾ..? ಒಂದು ವೇಳೆ ಸಮಾಧಾನ ಸೂತ್ರ ಒಪ್ಪಿಗೆಯಾದ್ರೆ ಆ ಇಬ್ಬರು ಶಾಸಕರು ಯಾರಾಗ್ತಾರೆ..? ಮಹೇಶ್ ಕುಮಟಹಳ್ಳಿ, ಶ್ರೀಮಂತಗೌಡ ಪಾಟೀಲ್ ತ್ಯಾಗಕ್ಕೆ ರೆಡಿಯಾಗಿದ್ದಾರಾ..? ಈ ರಿತಿಯ ಪ್ರಶ್ನೆಗಳು ಬಿಜೆಪಿ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಜೊತೆಗೆ ಹೈಕಮಾಂಡ್ ಮುಂದೆಯೂ ಸಮಾಧಾನ ಸೂತ್ರವನ್ನ ಒಪ್ಪಿಸುವ ಸವಾಲು ಯಡಿಯೂರಪ್ಪಗಿದ್ದು, ಈ ತಿಂಗಳ ಅಂತ್ಯಕ್ಕೆ ಎಲ್ಲದಕ್ಕೂ ಉತ್ತರ ಸಿಗಲಿದೆ.