ಬೆಂಗಳೂರು: ಅನರ್ಹರ 10 ಕ್ಷೇತ್ರಗಳಲ್ಲಿ ಗೊಂದಲ ಕ್ಲಿಯರ್ ಮಾಡಿಕೊಂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಇದರಲ್ಲಿ 7 ಕ್ಷೇತ್ರಗಳಲ್ಲಿ ಬಂಡಾಯ ಸಮಸ್ಯೆ ಕಾಡುತ್ತಿದೆ. ಹುಣಸೂರು, ರಾಣೆಬೆನ್ನೂರು, ಅಥಣಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ.
ಹೊಸಕೋಟೆ, ಗೋಕಾಕ್, ಕಾಗವಾಡದಲ್ಲಿ ಬಂಡಾಯದ ಬೇನೆ ಆರಂಭವಾದರೆ ಶಿವಾಜಿನಗರದಲ್ಲಿ ಅನರ್ಹ ಶಾಸಕನ ಸೇರ್ಪಡೆಗೆ ಶುರುವಾಗಿದೆ ಸಮಸ್ಯೆ ಎದುರಾಗಿದೆ. ಒಟ್ಟಿನಲ್ಲಿ ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಆಯ್ಕೆಯಾಗುತ್ತಾ ಅನ್ನೋ ಕುತೂಹಲ ಹುಟ್ಟಿದೆ.
Advertisement
Advertisement
ಸಪ್ತ ಸಮಸ್ಯೆಯಲ್ಲಿ ಬಿಎಸ್ ವೈ!
> ಹುಣಸೂರು – ವಿಶ್ವನಾಥ್, ಯೋಗೇಶ್ವರ್, ಹರೀಶ್ ಗೌಡ ನಡುವೆ ರೇಸ್
> ಅಥಣಿ– ಮಹೇಶ್ ಕುಮಟಹಳ್ಳಿ, ಲಕ್ಷ್ಮಣ ಸವದಿ ನಡುವೆ ರೇಸ್
> ರಾಣೆಬೆನ್ನೂರು- ಶಂಕರ್, ಕಾಂತರಾಜು
Advertisement
> ಗೋಕಾಕ್- ಅಶೋಕ್ ಪೂಜಾರಿ ಬಂಡಾಯ
> ಕಾಗವಾಡ- ರಾಜುಕಾಗೆ ಕಾಂಗ್ರೆಸ್ ಗೆ ಜಂಪ್
> ಹೊಸಕೋಟೆ- ಶರತ್ ಬಚ್ಚೇಗೌಡ ಬಂಡಾಯ
Advertisement
> ಶಿವಾಜಿನಗರ ಬೇಗ್ ಸೇರ್ಪಡೆ ಟೆನ್ಶನ್
ಇತ್ತ ಶಿವಾಜಿನಗರದ ಅನರ್ಹ ಶಾಸಕ ರೋಷನ್ ಬೇಗ್ ಅವರಿಗೆ ಬಿಜೆಪಿ ಹೈಕಮಾಂಡ್ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಬೇಗ್ ಗೆ ಬಿಜೆಪಿ ಕೈ ಕೊಟ್ಟಿದೆ. ಐಎಂಎ ಕೇಸ್‍ನಲ್ಲಿ ಬೇಗ್ ಹೆಸರು ತಳುಕು ಹಾಕಿಕೊಂಡಿದ್ದರ ಪರಿಣಾಮದಿಂದ ಬೇೀಗ್ ಸೇರ್ಪಡೆಗೆ ಕೊನೆ ಕ್ಷಣದಲ್ಲಿ ಬಿಜೆಪಿ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಇಂದು 16 ಅನರ್ಹ ಶಾಸಕರು ಬಿಜೆಪಿಗೆ- ರೋಷನ್ ಬೇಗ್ ಸೇರ್ಪಡೆಗೆ ಬ್ರೇಕ್
ಒಟ್ಟಿನಲ್ಲಿ ಸರ್ಕಾರ ರಚನೆಗೆ ಕಾರಣರಾಗಿದ್ದ ಅನರ್ಹ ಶಾಸಕರು, ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿತ್ತು. ಈ ಮೂಲಕ ಉಪಚುನಾವಣೆಯಲ್ಲಿಯೂ ಬಿಜೆಪಿ ಜಯ ಸಾಧಿಸುತ್ತದೆ ಎಂಬ ವಿಶ್ವಾಸದಲ್ಲಿದ್ದ ಬಿಎಸ್‍ವೈ ಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ.