ಬೆಂಗಳೂರು: ಸಂಕ್ರಾಂತಿ ಮುಗೀತು, ಇನ್ಮೇಲೆ ಅಸಲಿ ಆಟ ಶುರು. ಮಿತ್ರಮಂಡಳಿ ನಡೆ ಇನ್ನೇನಿದ್ರೂ ಹೈಕಮಾಂಡ್ ಕಡೆ. ಯಡಿಯೂರಪ್ಪಗೀಗ ಶುರುವಾಯ್ತು ಸಂಕಟ. ಏನು ಮಡುತ್ತಾರೆ ಕಡೆತನಕ ಅನ್ನೋದೇ ಈಗಿನ ಕುತೂಹಲ. ಗೆದ್ದ 24 ಗಂಟೆಯಲ್ಲಿ ಮಂತ್ರಿ ಮಾಡ್ತೀನಿ ಅಂತ ಯಡಿಯೂರಪ್ಪ ಹೇಳಿದ್ದರು. ಆದರೆ ತಿಂಗಳ ಮೇಲಾದರೂ ಬಿಜೆಪಿ ಹೈಕಮಾಂಡ್ ನಾಯಕರು ತುಟಿ ಬಿಚ್ಚುತ್ತಿಲ್ಲ. ಹಾಗಾದ್ರೆ ಡೆಡ್‍ಲೈನ್ ಮುಗಿದರೂ ಗೆದ್ದು ಬಂದವರು ಸುಮ್ಮನಿರ್ತಾರಾ ಅನ್ನೋ ಚರ್ಚೆಯೂ ಜೋರಾಗಿದೆ.
Advertisement
ಅಂದಹಾಗೆ ಯಡಿಯೂರಪ್ಪ ಫಾರಿನ್‍ಗೂ ಹೋಗಬೇಕು, ಸಂಪುಟ ವಿಸ್ತರಣೆನೂ ಮಾಡಬೇಕು. ಇನ್ನೊಂದೆಡೆ ಬಿಜೆಪಿ ಹೈಕಮಾಂಡ್ ವರಸೆಗೆ ಕಂಗಾಲಾಗಿ ಮಿತ್ರಮಂಡಳಿ ಟೀಂ ಫುಲ್ ಗರಂ ಆಗಿದೆ ಎನ್ನಲಾಗಿದೆ. ಇಷ್ಟು ದಿನ ಬಹಿರಂಗವಾಗಿ ಮಾತನಾಡದೇ ಎಚ್ಚರಿಕೆಯಿಂದಿರುವ ಮಿತ್ರಮಂಡಳಿ, ಅಮಿತ್ ಶಾ, ಬಿಎಸ್‍ವೈ ಮಾತುಕತೆ ವೇಳೆ ಗ್ರೀನ್ ಸಿಗ್ನಲ್ ಸಿಗದಿದ್ದರೆ ಅಸಲಿ ಆಟ ಶುರು ಮಾಡಿದರೂ ಅಚ್ಚರಿ ಇಲ್ಲ. ಹಾಗಾಗಿಯೇ ಮಿತ್ರಮಂಡಳಿ ಟೀಂನಿಂದ ಯಡಿಯೂರಪ್ಪ ಮುಂದೆ ಸಿದ್ಧ ಸೂತ್ರ ಇಟ್ಟಿದ್ದಾರೆ ಎನ್ನಲಾಗಿದೆ. ಮಿತ್ರಮಂಡಳಿ ಸಿದ್ಧ ಸೂತ್ರವನ್ನೇ ಹೈಕಮಾಂಡ್ ಮುಂದಿಡಲು ಬಿಎಸ್‍ವೈ ತಂತ್ರ ರೂಪಿಸಿದ್ದಾರೆ ಅನ್ನೋದು ಬಿಜೆಪಿಯಲ್ಲಿ ದೊಡ್ಡದಾಗಿಯೇ ಸದ್ದು ಮಾಡುತ್ತಿದೆ.
Advertisement
Advertisement
ಸದ್ಯ ಮೊದಲ ಹಂತದಲ್ಲಿ 11 ಶಾಸಕರನ್ನ ಮಂತ್ರಿ ಮಾಡಲೇ ಬೇಕು. ಎರಡನೇ ಹಂತದಲ್ಲಿ ಸೋತ ಇಬ್ಬರು, ಸ್ಪರ್ಧಿಸದ ಶಂಕರ್‍ರನ್ನ ಮಂತ್ರಿ ಮಾಡಬೇಕು. ಅಂತಿಮವಾಗಿ ಮುನಿರತ್ನ, ಪ್ರತಾಪ್‍ಗೌಡ್ ಪಾಟೀಲ್ ಲೈನ್ ಕ್ಲೀಯರ್ ಮಾಡಬೇಕು ಇದು ಮಿತ್ರಮಂಡಳಿ ಇಟ್ಟಿರುವ ಸಿದ್ಧ ಸೂತ್ರ. ಅಲ್ಲದೆ ಈ ಸಿದ್ಧ ಸೂತ್ರ ಅಮಿತ್ ಶಾ ಎದುರು ಕ್ಲೀಯರ್ ಆಗಬೇಕು ಅಂತ ಯಡಿಯೂರಪ್ಪ ಬಳಿ ಮನವಿ ಮಾಡಿದ್ದಾರೆ. ಹಾಗಾದರೆ ಮಿತ್ರಮಂಡಳಿ ಕೊಟ್ಟಿರುವ ಡೆಡ್‍ಲೈನ್‍ಗೆ ಹೈಕಮಾಂಡ್ ಮಣಿಯುತ್ತಾ..? ಸಿಎಂ ಫಾರಿನ್‍ಗೆ ಹೋಗುವ ಮೊದಲು ಗ್ರೀನ್ ಸಿಗ್ನಲ್ ಸಿಕ್ಕಿದ್ರೆ ಬಚಾವ್ ಆಗ್ತಾರಾ..? ಸಿಎಂ ಫಾರಿನ್‍ನಿಂದ ಬಂದ ತಕ್ಷಣ ಸಂಪುಟ ವಿಸ್ತರಣೆ ಆಗೇಬಿಡುತ್ತಾ ಎಂಬುದೇ ಸದ್ಯದ ಕುತೂಹಲವಾಗಿದೆ.
Advertisement