ಬೆಂಗಳೂರು: ಹಬ್ಬಕ್ಕೆ ದುಪ್ಪಟ್ಟು ದರ ಪಡೆಯುತ್ತಿರುವ ಖಾಸಗಿ ಟ್ರಾವೆಲ್ಸ್‌ಗಳಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ಕೊಟ್ಟಿದೆ. ಹೌದು, ನಿಯಮ ಮೀರಿ ಪ್ರಯಾಣದ ದರ ಪಡೆಯುತ್ತಿರುವ ಖಾಸಗಿ ಬಸ್‍ಗಳ ಮೇಲೆ ಅಧಿಕಾರಿಗಳು ರೈಡ್ ಮಾಡುತ್ತಿದ್ದಾರೆ.
ಹಬ್ಬದ ದಿನಗಳಲ್ಲಿ ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಊರಿಗೆ ಮರಳುತ್ತಾರೆ. ಹೀಗಾಗಿ ಖಾಸಗಿ ಟ್ರಾವೆಲ್ಸ್ ಗಳು ಲಾಭಕ್ಕಾಗಿ ಪ್ರಯಾಣಿಕರಿಂದ ಹೆಚ್ಚು ಹಣ ಪಡೆಯುತ್ತವೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.
Advertisement
ಜಂಟಿ ಸಾರಿಗೆ ಆಯುಕ್ತ ಜ್ಞಾನೇಂದ್ರ ಕುಮಾರ್ ಮತ್ತು ಅಪರ ಸಾರಿಗೆ ಆಯುಕ್ತ ನಾರಾಯಣ್ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗುತ್ತಿದೆ. ಒಟ್ಟು 12 ತಂಡಗಳನ್ನು ರಚಿಸಲಾಗಿದ್ದು, ಅದರಲ್ಲಿ 35 ಜನ ಆರ್‌ಟಿಓ ಇನ್‍ಸ್ಪೆಕ್ಟರ್ ಗಳು ಹಾಗೂ 20 ಜನ ಅಧಿಕಾರಿಗಳಿದ್ದಾರೆ. ಈ ತಂಡಗಳು ಬೆಂಗಳೂರಿನಿಂದ ಹೊರ ಹೊಗುವ ಪ್ರತಿ ಬಸ್ ಅನ್ನು ತಪಾಸಣೆ ಮಾಡುತ್ತಿವೆ.
Advertisement
Advertisement
ಬಸ್‍ನಲ್ಲಿ ಪ್ರಯಾಣಿಕರು ಮತ್ತು ಅವರ ಲಗೇಜ್ ಹೊರತು ಪಡಿಸಿ ಯಾವುದೇ ರೀತಿಯ ವಸ್ತುಗಳನ್ನು ಹಾಕುವಂತಿಲ್ಲ. ನಿಯಮ ಮೀರಿ ಹಣ ಪಡೆದಿರುವ ಬಗ್ಗೆ ಮಾಹಿತಿ ಪಡೆಯಲು ಪ್ರಯಾಣಿಕರಿಂದ ಟಿಕೆಟ್ ತಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಒಂದು ವೇಳೆ ಹೆಚ್ಚಿನ ಹಣ ಪಡೆದಿದ್ದರೆ ಅಂತಹ ಟ್ರಾವೆಸ್ಸ್ ವಿರುದ್ಧ ಪ್ರಕರಣ ದಾಖಲಿಸಲು ಆರ್‍ಟಿಓ ಅಧಿಕಾರಿಗಳು ಮುಂದಾಗಿದ್ದಾರೆ.
Advertisement
ಎಲ್ಲೆಲ್ಲಿ ಪರಿಶೀಲನೆ?: ಮೆಜೆಸ್ಟಿಕ್, ಕಲಾಸಿಪಾಳ್ಯ, ಗೊರಗುಂಟೆಪಾಳ್ಯ, ನೆಲಮಂಗಲ, ದೇವನಹಳ್ಳಿ ಟೋಲ್ ಸೇರಿದಂತೆ ಬೆಂಗಳೂರಿನಿಂದ ಹೊರ ಭಾಗಗಳ ಪ್ರತಿ ಟೋಲ್‍ಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಈ ಮೂಲಕ ಖಾಸಗಿ ಟ್ರಾವೆಲ್ಸ್ ಗಳ ದರ್ಬಾರ್ ಗೆ ಬ್ರೇಕ್ ಹಾಕಲು ಹಾಗೂ ಪ್ರಯಾಣಿಕರ ಮೇಲೆ ಆಗುತ್ತಿರುವ ಹೊರೆಯನ್ನು ತಡೆಯಲು ಸಾರಿಗೆ ಇಲಾಖೆ ಮುಂದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv