Connect with us

Bengaluru City

ಜನವರಿ 8ರ ಮುಷ್ಕರಕ್ಕೆ ಅನುಮತಿಯಿಲ್ಲ: ಭಾಸ್ಕರ್ ರಾವ್

Published

on

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ 10 ಕಾರ್ಮಿಕ ಸಂಘಟನೆಗಳು ಬುಧವಾರ ದೇಶವ್ಯಾಪಿ ಬಂದ್‍ಗೆ ಕರೆ ನೀಡಿದೆ. ಆದರೆ ಜನವರಿ 8ರ ಮುಷ್ಕರಕ್ಕೆ ಪೊಲೀಸ್ ಇಲಾಖೆ ಬಿಗ್ ಶಾಕ್ ನೀಡಿದೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮುಷ್ಕರ ಅಥವಾ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದೆ. ಮುಷ್ಕರದ ಹೆಸರಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಮುಷ್ಕರಕ್ಕೆ ಅನುಮತಿ ನೀಡದಂತೆ ಖಡಕ್ ಸೂಚನೆ ನೀಡಿದರು.

ಒಂದು ವೇಳೆ ಆದೇಶ ಉಲ್ಲಂಘಿಸಿ ಮೆರವಣಿಗೆ ಮಾಡಿದರೆ ಆಯೋಜಕರ ಮೇಲೆ 107 ಸೆಕ್ಷನ್ ಆಡಿ ಕೇಸ್ ದಾಖಲಿಸಲು ಕಮಿಷನರ್ ಸೂಚನೆ ನೀಡಿದರು. ಕೆಲವು ಕಾರ್ಮಿಕ ಸಂಘಟನೆಗಳು ಮೆರವಣಿಗೆ ಮಾಡುವುದಾಗಿ ಅನುಮತಿ ಕೇಳೋದಕ್ಕೆ ಬಂದಿದ್ದರು. ಆದರೆ ನಾವು ಮೆರವಣಿಗೆ ಮಾಡಲು ಅನುಮತಿ ಕೊಡಲ್ಲ ಅಂತ ಹೇಳಿದ್ದೀವಿ. ಅವರು ಏನೇ ಮಾಡೋದ್ದಿದ್ದರೂ ಫ್ರೀಡಂ ಪಾರ್ಕಿನಲ್ಲಿ ಮಾಡಬೇಕು ಎಂದರು. ಇದನ್ನೂ ಓದಿ: ಬುಧವಾರ ಕಾರ್ಮಿಕರ ಪ್ರತಿಭಟನೆ – ಭಾರತ್ ಬಂದ್ ಯಾಕೆ? ಬೇಡಿಕೆ ಏನು?

ಬೆಂಗಳೂರಿನಲ್ಲಿ ದಿನ ಬೆಳಗಾದ್ರೆ ಟ್ರಾಫಿಕ್ ಜಾಮ್ ಅಗುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಅಗುತ್ತದೆ. ಇವರು ಮೆರವಣಿಗೆ ಮಾಡಿ ಲಕ್ಷಾಂತರ ಜನರಿಗೆ ತೊಂದರೆ ಕೊಡಲು ಬಿಡಲ್ಲ. ಭಾರತ್ ಬಂದ್ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಒಂದು ವೇಳೆ ಬಂದ್ ಮಾಡಿದರೆ ಅದಕ್ಕೆ ಆಯೋಜಕರೇ ನೇರ ಹೊಣೆಯಾಗುತ್ತಾರೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಷರತ್ತುಗಳು ಇವೆ. ಏನೇ ಸಣ್ಣ ಘಟನೆಯಾದರೂ ಆಯೋಜಕರ ಮೇಲೆ ಕೇಸ್ ಹಾಕುತ್ತೇವೆ. ಏನೇ ಅನಾಹುತವಾದರೂ ಅವರೇ ಅದಕ್ಕೆ ಜವಾಬ್ದಾರರು ಎಂದು ಕಮಿಷನರ್ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *