ಬೆಂಗಳೂರು: ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಸಾಲು ಸಾಲು ಸಾವುಗಳಾದ್ರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ತಿಲ್ಲ. ಬೆಸ್ಕಾಂ ಬೇಜಾವಾಬ್ದಾರಿಗೆ ನಗರದಲ್ಲಿ ಇದೀಗ ಮತ್ತೊಂದು ಜೀವ ಬಲಿಯಾಗಿದೆ.
ಹಲಸೂರಿನ ಯಲ್ಲಮ್ಮ ಕೋಯಿಲ್ ಸ್ಟ್ರೀಟ್ ಬಳಿ 25 ವರ್ಷದ ಅಪ್ಪು ಎಂಬಾತ ಸಾವನ್ನಪ್ಪಿದ್ದಾನೆ. ಈ ಘಟನೆ ನಡೆದ ಸ್ಥಳದಲ್ಲಿ ಅನಧಿಕೃತವಾಗಿ ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಇಲ್ಲಿ ಕಂಬಿ ಕೆಲಸ ನಡೆಯುತ್ತಿದ್ದು, ಆಯಾತಪ್ಪಿ ಬಿದ್ದಂತಹ ಕಂಬಿಗಳನ್ನ ರಾಜಕಾಲುವೆಯಲ್ಲಿ ಬಿಸಾಡಿದ್ರು. ಇದನ್ನ ಅರಿಯದ ಯುವಕ, ವೈರ್‍ನ್ನು ತೆಗೆಯಲು ಬಂದಾಗ, ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಗ್ಗೆ 6:30ರ ಸುಮಾರಿಗೆ ಘಟನೆ ನಡೆದಿದೆ. ಇದನ್ನೂ ಓದಿ: ಕಾರಿಗೆ ಬೆಂಕಿ ಇಟ್ಟ ಹೊಣೆ ನಾಯಕನಾಗಿ ನಾನೇ ಹೊರುತ್ತೇನೆ: ಮೊಹಮ್ಮದ್ ನಲಪಾಡ್
Advertisement
Advertisement
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸುರಿದ ಮಳೆಗೆ ವಿದ್ಯುತ್ ತಂತಿ 2 ತುಂಡಾಗಿ ರಾಜಕಾಲುವೆಯೊಳಗೆ ಬಿದ್ದಿದೆ. ಸುತ್ತಮುತ್ತಲಿನ ಮನೆಗಳಿಗೆ ಕಳೆದ 3 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಕಾಲುವೆಯಲ್ಲಿ ತುಂಡಾಗಿ ಬಿದ್ದ ವೈಯರ್ ನಲ್ಲಿ ವಿದ್ಯುತ್ ಪಾಸ್ ಆಗ್ತಿತ್ತು. ಈ ಬಗ್ಗೆ ಸ್ಥಳೀಯರು ಬೆಸ್ಕಾಂಗೆ ಮಾಹಿತಿ ನೀಡಿದ್ರೂ ಖ್ಯಾರೆ ಅಂದಿಲ್ಲ. ಇದೆ ನಿರ್ಲಕ್ಷ್ಯಕ್ಕೆ ಈ ಯುವಕ ಬಲಿಯಾಗಿದ್ದಾನೆ. ಆದರೆ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಯುವಕ ಬಲಿ ಅನ್ನೋ ಆರೋಪವನ್ನ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.
Advertisement
Advertisement
ಒಟ್ಟಾರೆ ಬೆಸ್ಕಾಂನ ಸಣ್ಣ ಅಜಾಗರೂಕತೆಯಿಂದ ಓರ್ವ ವ್ಯಕ್ತಿಯ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ಈ ಯುವಕನ ಸಾವಿಗೆ ನ್ಯಾಯ ಕೊಡಿಸಿ ಅಂತ ಮೃತನ ಕುಟುಂಬಸ್ಥರು ಕೇಳ್ತಿದ್ದಾರೆ. ಆದ್ರೆ, ತಪ್ಪು ಒಪ್ಪಿಕೊಳ್ಳದ ಬೆಸ್ಕಾಂ ಪರಿಹಾರ ನೀಡುವ ವಿಚಾರದಲ್ಲಿ ಯಾವ ನಿಲುವನ್ನು ತಾಳುತ್ತೆ ಅನ್ನೋದು ಕಾದು ನೋಡ್ಬೇಕಿದೆ.
Live Tv
[brid partner=56869869 player=32851 video=960834 autoplay=true]