ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಶುದ್ಧೀಕರಣವನ್ನು ಈಗ ಡ್ರೋನ್ ಮೂಲಕ ಮಾಡಬಹುದು.
ಹೌದು. ಇಂತಹದ್ದೊಂದು ವಿನೂತನ ಮಾದರಿಯ ಡ್ರೋನ್ ಅನ್ನು ನಗರದ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಸಂಸ್ಥೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
Advertisement
Advertisement
ಇದು ನೀರಿನಲ್ಲಿ ಮೀನಿನಂತೆ ಸರಾಗವಾಗಿ ಈಜ ಬಲ್ಲದು. ನದಿ ಅಥವಾ ಕೆರೆಗಳ ಆಳದಲ್ಲಿ ಇಳಿದು, ಅಲ್ಲಿ ತುಂಬಿರುವ ಹೂಳಿನ ಪ್ರಮಾಣ, ನೀರಿನಲ್ಲಿ ಸೇರಿಕೊಂಡಿರುವ ರಾಸಾಯನಿಕ ವಸ್ತುಗಳು, ಗುಣಮಟ್ಟ ಸೇರಿದಂತೆ ಸಮಗ್ರ ಚಿತ್ರಣವನ್ನು ನೀಡಲಿದೆ. ಆ ಮಾಹಿತಿಯನ್ನು ಆಧರಿಸಿ ಶುದ್ಧೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು. ಇಂತಹದ್ದೊಂದು ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದು ದೇಶದಲ್ಲಿ ಇದೇ ಮೊದಲು ಎನ್ನಲಾಗಿದೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv