ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಒಂದು ದಿನ ಬಾಕಿ ಇದೆ. ಒಂದು ಕಡೆ ಸಚಿವ ಸ್ಥಾನ ಸಿಗುತ್ತೋ ಬಿಡತ್ತೋ ಗೊತ್ತಿಲ್ಲ. ಆದರೆ ಬೆಳಗಾವಿ ಶಾಸಕ ಉಮೇಶ್ ಕತ್ತಿ ಮಾತ್ರ ಬೆಳಗಾವಿ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದು, ಮಂತ್ರಿ ಆದ ಮೇಲೆ ನಾನೇ ಬೆಳಗಾವಿ ಉಸ್ತುವಾರಿ ಮಂತ್ರಿ ಆಗ್ತೀನಿ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಾಸಕರ ಭವನದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ವಿಸ್ತರಣೆ ಆಗ್ತಿದೆ. ಮಂತ್ರಿ ಸ್ಥಾನ ಕೊಟ್ಟರೆ ರಾಜ್ಯದ ಕೆಲಸ ಮಾಡ್ತೀನಿ. ಇಲ್ಲ ಅಂದ್ರೆ ಶಾಸಕನಾಗಿ ಕೆಲಸ ಮಾಡ್ತೀನಿ ಅಂತ ತಿಳಿಸಿದರು. ನೂರಕ್ಕೆ ನೂರು ನಾನು ಮಂತ್ರಿ ಆಗೋ ವಿಶ್ವಾಸ ಇದೆ. 13 ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗ ಕೊಟ್ಟರೂ ರಾಜ್ಯದ ಜನರ ಕೆಲಸ ಮಾಡ್ತೀನಿ ಅಂತ ತಿಳಿದರು. ನನಗೆ ಯಾವುದೇ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಅಂಕಿ-ಅಂಶ ಖಾತೆ, ವಯಸ್ಕರ ಶಿಕ್ಷಣ ಸೇರಿ ಯಾವುದೇ ಖಾತೆ ಕೊಟ್ರು ನಿಭಾಯಿಸುತ್ತೇನೆ ಅಂತ ತಿಳಿಸಿದರು.
Advertisement
Advertisement
ಇದೇ ವೇಳೆ ಸಿಎಂ ಯಡಿಯೂರಪ್ಪ ಬಳಿ ಬೆಳಗಾವಿ ಉಸ್ತುವಾರಿ ಕೇಳ್ತೀರಾ ಸಾರ್ ಅನ್ನೋ ಪ್ರಶ್ನೆಗೆ ಉತ್ತರಿಸಿದ ಉಮೇಶ್ ಕತ್ತಿ, ಮಂತ್ರಿ ಆದ ಮೇಲೆ ಬೆಳಗಾವಿ ಉಸ್ತುವಾರಿ ಸಿಎಂ ಬಳಿ ಕೇಳುತ್ತೇನೆ. ನಾನು ಪಕ್ಷದಲ್ಲಿ ಸೀನಿಯರ್ ಆಗಿದ್ದೇನೆ. ನನಗೆ ಸಿಎಂ ಬೆಳಗಾವಿ ಉಸ್ತುವಾರಿ ಕೊಟ್ಟೇ ಕೊಡ್ತಾರೆ. ಮಂತ್ರಿ ಆದ ನಂತ್ರ ಉಸ್ತುವಾರಿ ಬಗ್ಗೆ ಸಿಎಂಗೆ ಕೇಳ್ತೀನಿ ಅಂತ ಸ್ಪಷ್ಟಪಡಿಸಿದರು.
Advertisement
ಈ ಮೂಲಕ ಬೆಳಗಾವಿ ಉಸ್ತುವಾರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ರಮೇಶ್ ಜಾರಕಿಹೋಳಿ ಕೂಡ ಉಸ್ತುವಾರಿ ಆಕಾಂಕ್ಷಿ ಆಗಿದ್ದು, ಸಿಎಂ ಯಡಿಯೂರಪ್ಪ ಯಾರಿಗೆ ಬೆಳಗಾವಿ ಉಸ್ತುವಾರಿ ಕೊಡ್ತಾರೆ ಎಂಬುದನ್ನು ಕಾದು ನೋಡಬೇಕು.