ಬೆಂಗಳೂರು:ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಈಗ ಡಿಜಿಟಲ್ ಟ್ರಾನ್ಸ್ಫರ್ಮೆಶನ್ ವಿಚಾರದಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋವನ್ನು ಹಿಂದಿಕ್ಕಿ ವಿಶ್ವದಲ್ಲೇ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.
ಡಿಜಿಟಲ್ ಪರಿಸರದಲ್ಲಿ ಉದ್ಯಮ ವಿಶ್ವಾಸ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಈಗ ಇರುವ ಪರಿಸರದಲ್ಲಿ ಕೌಶಲ್ಯ ಮತ್ತು ಮೂಲಭೂತ ಸೌಕರ್ಯಗಳ ಆಧಾರದಲ್ಲಿ ‘ದಿ ಎಕಾನಮಿಸ್ಟ್ ಇಂಟೆಲಿಜೆನ್ಸಿ ಯೂನಿಟ್’ ಬಿಡುಗಡೆ ಮಾಡಿದ ವಿಶ್ವದ 45 ಮಹಾ ನಗರಗಳ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ಸಿಕ್ಕಿದೆ.
Advertisement
ಎರಡನೇ ಸ್ಥಾನದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಇದ್ದರೆ, ಮೂರು ಮತ್ತು ನಾಲ್ಕನೇಯ ಸ್ಥಾನವನ್ನು ಕ್ರಮವಾಗಿ ಮುಂಬೈ ಮತ್ತು ದೆಹಲಿ ಪಡೆದುಕೊಂಡಿದೆ. ಚೀನಾದ ರಾಜಧಾನಿ ಬೀಜಿಂಗ್ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದೆ.
Advertisement
ಉದ್ಯಮಶೀಲತೆ, ಆವಿಷ್ಕಾರ, ಕೌಶಲ್ಯ ಹೊಂದಿರುವ ಜನ, ಹೊಸ ತಂತ್ರಜ್ಞಾನ ಬೆಳವಣಿಗೆ, ಆರ್ಥಿಕ ವಾತಾವರಣ, ಮಾಹಿತಿ ಸಂವಹನ ತಂತ್ರಜ್ಞಾನ(ಐಸಿಟಿ) ಸೌಕರ್ಯಗಳ ವಿಚಾರಗಳನ್ನು ಅಧ್ಯಯನಕ್ಕೆ ಪರಿಗಣಿಸಿ ನಗರಗಳಿಗೆ ಶ್ರೇಯಾಂಕ ಪಟ್ಟಿಯನ್ನು ನೀಡಲಾಗಿದೆ.
Advertisement
ಜೂನ್ ಮತ್ತು ಜುಲೈ ತಿಂಗಳಿನಲ್ಲಿ 45 ಮಹಾ ನಗರಗಳ 2,620 ಕಾರ್ಯನಿರ್ವಹಣಾಧಿಕಾರಿಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
Advertisement
ಪಟ್ಟಿಯಲ್ಲಿ ಕೊನೆಯ ಐದು ಸ್ಥಾನವನ್ನು ಅನುಕ್ರಮವಾಗಿ ಬರ್ಲಿನ್(ಜರ್ಮನಿ), ಯೋಕೋಹಾಮಾ(ಜಪಾನ್), ಟೋಕಿಯೋ(ಜಪಾನ್), ತೈಪೆ(ತೈವಾನ್), ರೋಟರ್ಡಮ್(ನೆದರ್‍ಲ್ಯಾಂಡ್) ಪಡೆದುಕೊಂಡಿದೆ. ಇಂಗ್ಲೆಂಡಿನ ರಾಜಧಾನಿ ಲಂಡನ್ 9ನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಸ್ಪೇನ್ ರಾಜಧಾನಿ ಮ್ಯಾಡ್ರಿಡ್ 10ನೇ ಸ್ಥಾನವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿ 100ನೇ ಸ್ಥಾನಕ್ಕೆ ಜಿಗಿದ ಭಾರತ