ಬೆಂಗಳೂರು: ಕ್ರಿಸ್ಮಸ್ (Christmas), ಹೊಸ ವರ್ಷ (New Year) ಎಂದು ಹೇಳಿ ಮದ್ಯ ಪಾರ್ಟಿ ಮಾಡಿ ವಾಹನ ಚಾಲನೆ ಮಾಡಿದ್ರೆ ನಿಮ್ಮ ಗಾಡಿ ಜಪ್ತಿಯಾಗಲಿದೆ.
ಬೆಂಗಳೂರು ಪೊಲೀಸರು (Bengaluru Police) ಅಲರ್ಟ್ ಆಗಿದ್ದು ನಗರದಾದ್ಯಂತ ಟ್ರಾಫಿಕ್ ಪೊಲೀಸರಿಂದ (Traffic Police) ಡ್ರಂಕ್ ಆಂಡ್ ಡ್ರೈವ್ ಟೆಸ್ಟ್ ಆರಂಭವಾಗಿದೆ. ನಗರ ಪೊಲೀಸ್ ಆಯುಕ್ತ ದಯಾನಂದ್ ಅವರ ಸೂಚನೆ ಮೇರೆಗೆ ಈಗಿನಿಂದಲೇ ಕುಡಿದು ವಾಹನ ಚಲಾಯಿಸದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಕುಡಿದು ವಾಹನ ಚಲಾಯಿಸಿದರೆ ದಂಡದ ಜೊತೆ ವಾಹನವನ್ನು ಸೀಜ್ ಮಾಡಲಾಗುತ್ತದೆ. ಇದನ್ನೂ ಓದಿ: ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್ ಸ್ಲಿಪ್ ಮತದಾರರ ಕೈಗೆ ನೀಡಬೇಕು
Advertisement
Advertisement
ಮಲ್ಲೇಶ್ವರದಲ್ಲಿ ಕಳೆದ ರಾತ್ರಿ ಹೈಡ್ರಾಮಾ ನಡೆದಿದೆ. ಮಲ್ಲೇಶ್ವರಂ ಸಂಚಾರ ಪೊಲೀಸರು ದೇವಯ್ಯ ಪಾರ್ಕ್ ಬಳಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಾವು ಕುಡಿದೇ ಇಲ್ಲ ಎಂದು ಕೆಲವರು ನಾಟಕ ಮಾಡಿದ್ದಾರೆ. ಆದರೆ ಆಲ್ಕೋ ಮೀಟರ್ ತಪಾಸಣೆ ಬಳಿಕ ಮೌನಕ್ಕೆ ಶರಣಾಗಿದ್ದಾರೆ.
Advertisement
ಕುಡಿದು ಚಾಲನೆ ಮಾಡಿದರೆ ರಶೀದಿಯನ್ನು ಚಾಲಕನ ಕೈಗೆ ನೀಡಿ ವಾಹನವನ್ನು ಜಪ್ತಿ ಮಾಡಲಾಗುತ್ತದೆ. ನಂತರ ಕೋರ್ಟ್ ನಲ್ಲಿ ದಂಡ ಪಾವತಿಸಿ ಬಂದರೆ ಮಾತ್ರ ವಾಹನ ರಿಲೀಸ್ ಮಾಡಲಾಗುತ್ತದೆ.
Advertisement