ಬೆಂಗಳೂರು: ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಸಿದೆ. ಬುಧವಾರ ನಡೆದ ಕಾರ್ಯಾಚರಣೆಯಲ್ಲಿ ಜೆ.ಪಿ ನಗರದ 9ನೇ ಫೇಸ್, 2ನೇ ಬ್ಲಾಕ್ನಲ್ಲಿ 8.20 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಆಲಹಳ್ಳಿ ಗ್ರಾಮದ ಸರ್ವೆ ನಂ. 84/1ರಲ್ಲಿನ ನಿವೇಶನ ಸಂಖ್ಯೆ 34, 73, 74, 114 ರಲ್ಲಿ ಅನಧಿಕೃ ನಿರ್ಮಾಣಗಳನ್ನು ತೆರವುಗೊಳಿಸಿ, 7340 ಚದರ ಅಡಿ ವಿಸ್ತೀರ್ಣದ ಸುಮಾರು 8.20 ಕೋಟಿ ಬೆಲೆ ಬಾಳುವ ಪ್ರದೇಶವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವಶಪಡಿಸಿಕೊಂಡಿದೆ. ಇದನ್ನೂ ಓದಿ: ಅವಧಿಗೂ ಮುನ್ನ ಅರ್ಧದಷ್ಟು ಭರ್ತಿಯಾದ ಟಿಬಿ ಡ್ಯಾಂ – ಜು.1ಕ್ಕೆ ಕಾಲುವೆಗೆ ನೀರು ಬಿಡುಗಡೆ ಸಾಧ್ಯತೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸ್ಥಳೀಯ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಇದನ್ನೂ ಓದಿ: ಸೈಬರ್ ಪೊಲೀಸರ ಸೋಗಿನಲ್ಲಿ ಬ್ಲ್ಯಾಕ್ಮೇಲ್ – ಖರ್ತನಾಕ್ ಲೇಡಿ ಸೇರಿ 7 ಲಕ್ಷ ಸುಲಿಗೆ ಮಾಡಿದ್ದ ಐವರು ಅರೆಸ್ಟ್