ಬೆಂಗಳೂರು: ಭ್ರಷ್ಟರ ಕೂಪ ಬಿಡಿಎ ಕಚೇರಿಗಳ ಮೇಲೆ ಎಸಿಬಿ ದಾಳಿ ಮುಂದುವರಿದಿದೆ. ಬಿಡಿಎ ಬೀಲಕ್ಕೆ ಕೈ ಹಾಕಿರೋ ಎಸಿಬಿ ಅಧಿಕಾರಿಗಳು ಬಗೆದಷ್ಟು ಅಕ್ರಮಗಳು ಬಯಲಾಗುತ್ತಿವೆ.
Advertisement
3 ದಿನಗಳ ಗ್ಯಾಪ್ ಬಳಿಕ ಇವತ್ತು ಮತ್ತೆ ಬಿಡಿಎನಲ್ಲಿ ಸರ್ಚಿಂಗ್ ನಡೀತು. ಬಿಡಿಎ ಕೇಂದ್ರ ಕಚೇರಿಯಲ್ಲಿ ಲ್ಯಾಂಡ್ ಅಕ್ವಿಸಿಷನ್ ಅಧಿಕಾರಿ ಸೌಜನ್ಯ ಕಚೇರಿ, ಹೆಚ್.ಎಸ್.ಆರ್ ಲೇಔಟ್, ಆರ್.ಟಿ.ನಗರ ಬಿಡಿಎ ಕಚೇರಿ, ವಿಜಯನಗರ ಬಿಡಿಎ ಕಚೇರಿ, ಬನಶಂಕರಿ ಬಿಡಿಎ ಕಚೇರಿ ಮೇಲೆ ಪ್ರತ್ಯೇಕ ತಂಡಗಳಿಂದ ದಾಳಿ ಮಾಡಿ ಶೋಧ ಕಾರ್ಯ ಮಾಡಲಾಯ್ತು.
Advertisement
Advertisement
ನಾಲ್ಕು ಕಚೇರಿಗಳಿಂದ ಎಸಿಬಿಗೆ ಸಾಲು ಸಾಲು ದೂರುಗಳು ಬಂದಿದ್ದವು. ಎಸಿಬಿ ಅಧಿಕಾರಿಗಳು ದೂರುದಾರರ ಬಳಿಯೇ ಮಾಹಿತಿ ಹಾಗೂ ದಾಖಲೆಗಳನ್ನು ಕಲೆಹಾಕಿ ಇಂದು ದಾಳಿ ಮಾಡಲಾಯ್ತು. ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿಯಾದ ಬಳಿಕ 30ಕ್ಕೂ ಹೆಚ್ಚು ದೂರು ಬಂದಿದ್ದವು. ಬಂದ ದೂರುಗಳಲ್ಲಿ 20ಕ್ಕೂ ಹೆಚ್ಚು ದೂರುಗಳು ಈ ನಾಲ್ಕು ಬಿಡಿಎ ಕಚೇರಿಗಳದ್ದೇ ಇದ್ದ ಕಾರಣ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ರು. ಇದನ್ನೂ ಓದಿ: ಖಾಸಗಿ ಕ್ರಿಪ್ಟೋ ಕರೆನ್ಸಿ ಸಂಪೂರ್ಣ ನಿಷೇಧ ಮಸೂದೆ ಮಂಡಿಸಲು ಕೇಂದ್ರ ಚಿಂತನೆ?
Advertisement
ಬಿಡಿಎಯ ಲ್ಯಾಂಡ್ ಅಕ್ವಸಿಷನ್ ಕಚೇರಿಯ ಸಿಸ್ಟಂ ತಡಕಾಡಿದ ಎಸಿಬಿ ಅಧಿಕಾರಿಗಳು ಗೆದ್ದಲಹಳ್ಳಿ, ಅರ್ಕಾವತಿ ಬಡಾವಣೆಗೆ ಸೇರಿದ್ದ ಆ ಎಂಟು ಫೈಲ್‍ಗಳ ಸಾಫ್ಟ್ ಕಾಪಿಗಳನ್ನ ಹಾರ್ಡ್ ಡಿಸ್ಕ್‍ನಲ್ಲಿ ಕಾಪಿ ಮಾಡಿಕೊಂಡು ಪರಿಶೀಲನೆ ನಡೆಸಿದ್ರು. ಲ್ಯಾಂಡ್ ಅಕ್ವಿಸಿಷನ್‍ನಲ್ಲಿ ಬಡಾವಣೆ ನಿರ್ಮಾಣ ಹೆಸ್ರಲ್ಲಿ 100 ಕೋಟಿಯಷ್ಟು ಹಗರಣದ ದಾಖಲೆಗಳು ಇದೀಗ ಎಸಿಬಿ ಕೈಗೆ ಸಿಕ್ಕಿದೆ. ಇದ್ರ ಬೆನ್ನಲ್ಲೇ ಈಗ ಮತ್ತೆ ಸುಮಾರು 200 ಕೋಟಿಗೂ ಅಧಿಕ ಮೌಲ್ಯದ ಅಕ್ರಮದ ದಾಖಲೆಗಳು ಪತ್ತೆ ಆಗಿದೆ.
ಬಿಡಿಎ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ಅನರ್ಹ ವ್ಯಕ್ತಿಗಳಿಗೆ ಸೈಟ್‍ಗಳನ್ನ ನೀಡಿರೋದು ಕಂಡುಬಂದಿದೆ. ಹಳೆ ಬಡಾವಣೆಗಳಲ್ಲಿ ನಿವೇಶನಗಳನ್ನ ಹಂಚಿಕೆ ಮಾಡದೇ ಖಾಲಿ ಬಿಟ್ಟು ತಾತ್ಕಲಿಕಾವಾಗಿ ಶೆಡ್ ನಿರ್ಮಾಣ ಮಾಡಲು ಅವಕಾಶ ಕೊಟ್ಟು ಸರ್ಕಾರಕ್ಕೆ ನಷ್ಟ ಉಂಟು ಮಾಡಿರೋದು ಕಂಡು ಬಂದಿದೆ. ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿ ನಿಷೇಧದ ಬದಲು ನಿಯಂತ್ರಣ