ಬೆಂಗಳೂರು: ಈಗೇನಿದ್ರೂ ಸೋಶಿಯಲ್ ಮೀಡಿಯಾ ಜಮಾನ. ರಾಜಕಾರಣಿಗಳು, ಸಂಘ-ಸಂಸ್ಥೆಗಳು ತಮ್ಮ ಕಾರ್ಯಗಳನ್ನ ಫೇಸ್‍ಬುಕ್, ವಾಟ್ಸಪ್‍ಗಳ ಮೂಲಕ ಪ್ರಚಾರ ಮಾಡುತ್ತಾರೆ. ಅದರಂತೆ ಬಿಬಿಎಂಪಿಯೂ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆಕ್ಟಿವ್ ಆಗಿದೆ.
ಬಿಬಿಎಂಪಿ ಆಯುಕ್ತರ ಅಧೀನದ ಟ್ವಿಟ್ಟರ್ ಹಾಗೂ ಫೇಸ್‍ಬುಕ್ ಮೂಲಕ ಪ್ರಚಾರ ಮಾಡಲು ಲಕ್ಷಾಂತರ ರೂಪಾಯಿ ವ್ಯಯಿಸಿರೋದು ಆರ್.ಟಿ.ಐ ಮಾಹಿತಿಯಿಂದ ಬಹಿರಂಗವಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ವೆಚ್ಚದ ಮಾಹಿತಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ.
Advertisement
Advertisement
ಯಾವ ತಿಂಗಳಲ್ಲಿ ಎಷ್ಟು ಖರ್ಚು?
1. 2019 ಸೆಪ್ಟೆಂಬರ್ – 4,93,240 ರೂ.
2. 2019 ಅಕ್ಟೋಬರ್- 7,16,885 ರೂ.
3. 2019 ನವೆಂಬರ್ – 7,16,885 ರೂ.
Advertisement
ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರ ಅಧೀನದಲ್ಲಿ ಬಿಬಿಎಂಪಿಯ ಅಭಿವೃದ್ಧಿ ಕಾರ್ಯಗಳನ್ನು, ಸೋಶಿಯಲ್ ಮೀಡಿಯಾ ಮೂಲಕ ಪ್ರಚಾರಗೊಳಿಸಲು ಲಕ್ಷಾಂತರ ಹಣ ಖರ್ಚು ಮಾಡಲಾಗಿದೆ. ಈದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.