– ಮೊದಲು ಹಾಗೂ 2ನೇ ಬಾರಿ ಸಿಕ್ಕಿಬಿದ್ದರೆ ದಂಡವೆಷ್ಟು..?
– ಮಾಸ್ಕ್‌ಗಳನ್ನು ಕಡ್ಡಾಯವಾಗಿ ಸುಟ್ಟುಬಿಡಿ
ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಾಸ್ಕ್ ಬಳಕೆ ಮಾಡಲಾಗುತ್ತಿದ್ದು, ಆದರೆ ಜನ ಇದನ್ನು ಕಸದೊಂದಿಗೆ ಮಿಶ್ರಣ ಮಾಡಿಕೊಡುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಮಾಸ್ಕ್‌ಗಳನ್ನು ಕಸದೊಂದಿಗೆ ಕೊಟ್ಟರೆ ಅಂತವರಿಗೆ ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಂದೀಪ್ ಎಚ್ಚರಿಕೆ ನೀಡಿದ್ದಾರೆ.
Advertisement
ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಾಸ್ಕ್‌ಗಳನ್ನು ಕಸದೊಂದಿಗೆ ಮಿಶ್ರಣ ಮಾಡಿ ಕೊಟ್ಟರೆ ಅಂತವರ ಮೇಲೆ ಭಾರೀ ದಂಡ ವಿಧಿಸಲಾಗುವುದು. ಹಸಿ ಕಸ, ಒಣ ಕಸ ಪ್ರತ್ಯೇಕಿಸಿ ಕೊಡುವಂತೆ ಮಾಸ್ಕ್‌ಗಳನ್ನು ಕೂಡ ಸ್ಯಾನಿಟರಿ ತ್ಯಾಜ್ಯವೆಂದು ಪರಿಗಣಿಸಿ ಪ್ರತ್ಯೇಕವಾಗಿ ನೀಡಬೇಕು. ತ್ಯಾಜ್ಯದೊಂದಿಗೆ ಮಾಸ್ಕ್‌ಗಳನ್ನು ಮಿಕ್ಸ್ ಮಾಡಿ ಕೊಟ್ಟರೆ ಮೊದಲ ಬಾರಿ 500 ರೂ. ದಂಡದ ಜೊತೆಗೆ ಆ ಮನೆಯ ಕಸವನ್ನು ಪಡೆಯಲ್ಲ. ಎರಡನೇ ಬಾರಿ ಸಿಕ್ಕಿಬಿದ್ದರೆ 1 ರಿಂದ 2 ಸಾವಿರ ರೂ. ದಂಡ ಹಾಗೂ ಆ ಮನೆಯ ಕಸ ಸ್ವೀಕರಿಸಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ಕೊರೊನಾ ಸಂದರ್ಭದಲ್ಲಿ ತ್ಯಾಜ್ಯ ವಿಂಗಡಣೆ ಮಾಡೋದು ಸವಾಲಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಮಾಸ್ಕ್ ಗಳ ವಿಂಗಡನೆ ಪೌರಕಾರ್ಮಿಕರಲ್ಲಿ ಆತಂಕಕ್ಕೆ ಕಾರಣವಾಗಬಾರದು ಎನ್ನುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಮಾಸ್ಕ್ ಗಳನ್ನು ಕಡ್ಡಾಯವಾಗಿ ಸುಡಬೇಕು. ಮಾಸ್ಕ್ ರಿಸೈಕ್ಲಿಂಗ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ನಿರ್ಧಾರ ಅತ್ಯಗತ್ಯ. ಈಗ ನಿತ್ಯ ನಗರದಲ್ಲಿ ಸರಾಸರಿ 3100 ಟನ್ ಕಸ ಉತ್ಪತ್ತಿಯಾಗುತ್ತೆ ಎಂದು ರಂದೀಪ್ ಮಾಹಿತಿ ನೀಡಿದ್ದಾರೆ.
Advertisement
ಸ್ಯಾನಿಟರಿ ವಸ್ತುಗಳನ್ನು ಪ್ರತ್ಯೇಕಿಸಿ ಕೊಡುವಂತೆ ಸೂಚನೆ ನೀಡಿದರೂ ಕೆಲವರು ಪಾಲಿಸ್ತಿಲ್ಲ. ಬಿಬಿಎಂಪಿಯಿಂದ ಪಿಪಿಇ ಕಿಟ್ ನೀಡಲಾಗಿದೆ. ನಿತ್ಯ ಎರಡು ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಲಾಗ್ತಿದೆ. ಇದರ ಸಂಪೂರ್ಣ ವೆಚ್ಚ ಬಿಬಿಎಂಪಿಯೇ ಭರಿಸುತ್ತಿದೆ ಎಂದರು.