ಬೆಂಗಳೂರು: ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ, ಬಿಬಿಎಂಪಿ ಹಾಕಿದ್ದ ಸ್ವಾಗತ ಫಲಕದಲ್ಲಿ ಕನ್ನಡವನ್ನು ಬಳಸದೆ ಸುದ್ದಿಯಾಗಿತ್ತು.
ಮೋದಿ ಅವರು ಕಳೆದ ವಾರ ರಾಜಭವನದಲ್ಲಿ ಒಂದು ದಿನ ವಾಸ್ತವ್ಯ ಹೂಡಿದ್ದರು. ಆ ಸಮಯದಲ್ಲಿ ಬಿಬಿಎಂಪಿ ರಾಜಭವನದ ಹೊರಭಾಗದಲ್ಲಿ ದೊಡ್ಡದಾಗಿ ಹೂವಿನಿಂದ ಅಲಂಕಾರ ಮಾಡಿದ್ದ ಸ್ವಾಗತ ಫಲಕವನ್ನ ಹಾಕಿತ್ತು. ಆ ಸ್ವಾಗತ ಫಲಕದಲ್ಲಿ ಕನ್ನಡವನ್ನೇ ಬಳಸದೇ ಇಂಗ್ಲಿಷ್‍ನಲ್ಲಿ ಮೋದಿಗೆ ವೆಲ್‍ಕಮ್ ಹೇಳಿತ್ತು. ಆ ಸ್ವಾಗತ ಫಲಕದ ಫೋಟೋ ಸಿಕ್ಕಪಟ್ಟೆ ವೈರಲ್ ಆಗಿ ಬಿಬಿಎಂಪಿಯ ಕನ್ನಡ ದ್ರೋಹಿ ಕೆಲಸಕ್ಕೆ ಕನ್ನಡಿಗರು ಛೀಮಾರಿ ಹಾಕಿದ್ದರು.
Advertisement
Advertisement
ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಸಹ ಬಿತ್ತರವಾಗಿತ್ತು. ಈಗ ಎಚ್ಚೆತ್ತಿರೋ ಬಿಬಿಎಂಪಿ ರಾಜ್ಯಕ್ಕೆ ಇಂದು ಆಗಮಿಸುತ್ತಿರೋ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಕನ್ನಡದಲ್ಲೇ ಸ್ವಾಗತ ಫಲಕ ಹಾಕಿದ್ದಾರೆ. ಬೆಂಗಳೂರಿಗೆ ಆಗಮಿಸುತ್ತಿರೋ ಉಪರಾಷ್ಟ್ರಪತಿಗಳಿಗೆ ರಾಜಭವನದ ಮುಂದೆ ದೊಡ್ಡ ಹೂವಿನ ಸ್ವಾಗತ ಫಲಕ ಹಾಕಿರೋ ಬಿಬಿಎಂಪಿ ಸಂಪೂರ್ಣವಾಗಿ ಕನ್ನಡದಲ್ಲೇ ಸ್ವಾಗತ ಫಲಕ ಹಾಕಿ ತನ್ನ ಹಿಂದಿನ ತಪ್ಪನ್ನು ತಿದ್ದಿಕೊಂಡಿದೆ.