ಬೆಂಗಳೂರು: ಬಿಬಿಎಂಪಿ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ (ಟಿಇಸಿ) ನಲ್ಲಿ 109 ಕೋಟಿ ರೂಪಾಯಿ ಹಗರಣ ಆಗಿದೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್ ರಮೇಶ್ ಆರೋಪಿಸಿದ್ದರು. ಈ ಹಗರಣವನ್ನು ಸರ್ಕಾರ ಎಸಿಬಿ ತನಿಖೆಗೆ ವಹಿಸಿ ಆದೇಶಿಸಿದೆ.
ಟಿಇಸಿ ಸೆಲ್‍ನ, 17 ಮಂದಿ ಅಧಿಕಾರಿಗಳು ಹಾಗೂ 9 ಮಂದಿ ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗಿದೆ. 2017-18, 18-19ರ ಅವಧಿಯಲ್ಲಿ ಈ ಅವ್ಯವಹಾರ ನಡೆದಿದ್ದು, ಟಿವಿಸಿಸಿ ವರದಿ ಆಧರಿಸಿ ಹಗರಣದ ತನಿಖೆಯನ್ನು ಎಸಿಬಿಗೆ ವಹಿಸುವಂತೆ 2019 ಅಕ್ಟೋಬರ್ 14ರಂದು ಪಾಲಿಕೆ ಆಯುಕ್ತರಿಗೆ ಆದೇಶಿಸಿದ್ದರು. ಬಳಿಕ ಟಿವಿಸಿಸಿ ವರದಿ ಸಮಗ್ರವಾಗಿ ಪರಿಶೀಲಿಸಿ, ಸಿಎಂ ಆದೇಶದಂತೆ ಈ ಹಗರಣವನ್ನು ಎಸಿಬಿಗೆ ವಹಿಸುಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು, ಇದೀಗ ತನಿಖೆಗೆ ಆದೇಶಿಸಿದೆ.
Advertisement
Advertisement
ರಸ್ತೆ ವಿಭಜಕಗಳು, ಲೇನ್ ಮಾರ್ಕಿಂಗ್, ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳಲ್ಲಿ ಅವ್ಯವಹಾರ ಆಗಿದೆ. ಟಿಇಸಿ ಅಧಿಕಾರಿಗಳು ಕೇವಲ 73 ಕೋಟಿ ರೂ. ಕಾಮಗಾರಿ ಕಡತಗಳನ್ನು ಮಾತ್ರ ನೀಡಿದ್ದರು. ಅದರಲ್ಲೂ ಹಗರಣ ಆಗಿರುವ ಬಗ್ಗೆ ಟಿವಿಸಿಸಿ ಬಯಲು ಮಾಡಿತ್ತು. ಈಗ ಎಸಿಬಿ ತನಿಖೆಗೆ ವಹಿಸಲಾಗಿದೆ.