– ಅಲ್ಟ್ರಾವೈಲೆಟ್ ಕಂಪನಿಯಿಂದ ಸ್ಫೋರ್ಟ್ಸ್ ಬೈಕ್
– ಒಂದು ಬಾರಿ ಚಾರ್ಜ್ ಮಾಡಿದ್ರೆ 140 ಕಿ.ಮೀ ಸಂಚರಿಸುತ್ತೆ
ಬೆಂಗಳೂರು: ಎಲೆಕ್ಟ್ರಿಕ್ ಬೈಕ್‍ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು ಈಗ ಬೆಂಗಳೂರು ಮೂಲದ ಕಂಪನಿಯೊಂದು ಸ್ಫೋರ್ಟ್ಸ್ ಬೈಕನ್ನು ಬಿಡುಗಡೆ ಮಾಡಿದೆ.
ಅಲ್ಟ್ರಾವೈಲೆಟ್ ಕಂಪನಿ ಎಫ್777 ಹೆಸರಿನಲ್ಲಿ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದೆ. ಏರ್ ಕೂಲ್ಡ್ ಬ್ರಷ್‍ಲೆಸ್ ಡಿಸಿ(ಬಿಎಲ್‍ಡಿಸಿ) ಮೋಟಾರ್ ಹೊಂದಿರುವ ಬೈಕ್ 25 ಕಿಲೋ ವ್ಯಾಟ್ (33.5 ಬಿಎಚ್‍ಪಿ) ಸಾಮರ್ಥ್ಯ 450 ಎನ್‍ಎಂ ಟಾರ್ಕ್ ಹೊಂದಿದ್ದು ಆನ್ ರೋಡ್ 3 ಲಕ್ಷ ರೂ. ದರವನ್ನು ನಿಗದಿ ಪಡಿಸಿದೆ.
Advertisement
Advertisement
ಗಂಟೆಗೆ 147 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಬೈಕ್ ಹೊಂದಿರುವುದು ವಿಶೇಷ. 0-60 ಕಿ.ಮೀ ವೇಗವನ್ನು 2.9 ಸೆಕೆಂಡಿನಲ್ಲಿ, 0-100 ಕಿ.ಮೀ ವೇಗವನ್ನು 7.5 ಸೆಕೆಂಡಿನಲ್ಲಿ ಕ್ರಮಿಸುತ್ತದೆ ಎಂದು ಕಂಪನಿ ತಿಳಿಸಿದೆ. ಬುಧವಾರದಿಂದಲೇ ಬುಕ್ಕಿಂಗ್ ಅವಕಾಶ ಆರಂಭಿಸಿದ್ದು 2020ರ ಮೂರನೇ ತ್ರೈಮಾಸಿಕದಲ್ಲಿ ಬೈಕ್ ಗ್ರಾಹಕರಿಗೆ ಸಿಗಲಿದೆ.
Advertisement
Advertisement
ಮೂರು ಸ್ಲಿಮ್ ಮತ್ತು ಮಾಡ್ಯುಲರ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದರೆ 130-140 ಕಿ.ಮೀ ಸಂಚರಿಸಬಹುದು ಎಂದು ಹೇಳಿಕೊಂಡಿದೆ. ಸ್ಟಾಂಡರ್ಡ್ ಚಾರ್ಜರ್ ಬಳಸಿದರೆ ಪೂರ್ಣವಾಗಿ ಚಾರ್ಜ್ ಆಗಲು 5 ಗಂಟೆ ಬೇಕು. ಪೋರ್ಟೆಬಲ್ ಫಾಸ್ಟ್ ಚಾರ್ಜರ್ ಬಳಸಿದರೆ 50 ನಿಮಿಷದಲ್ಲಿ ಶೇ.80 ರಷ್ಟು ಚಾರ್ಜ್ ಆದರೆ 90 ನಿಮಿಷದಲ್ಲಿ ಪೂರ್ಣವಾಗಿ 8.5 ಕೆಜಿ ತೂಕದ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು ಎಂದು ತಿಳಿಸಿದೆ.
ಡ್ಯುಯಲ್ ಎಬಿಎಸ್, ಫುಲ್ ಕಲರ್ ಟಿಎಫ್‍ಟಿ ಸ್ಕ್ರೀನ್ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ, ಏರ್ ಅಪ್‍ಡೇಟ್ ಮಾಡಲು ಅಪ್ಲಿಕೇಶನ್, ಬೈಕ್ ಲೊಕೇಟರ್, ರೈಡ್ ಅನಾಲಿಸಿಸ್, ಸ್ಪೀಡ್ ಲಿಮಿಟ್ ಗಳೊಂದಿಗೆ ಈ ಬೈಕ್ ಬಿಡುಗಡೆಯಾಗಿದೆ.
ಬೆಂಗಳೂರಿನ ಬಿಎಂಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ನಿರಾಜ್ ರಾಜ್‍ಮೋಹನ್ ಮತ್ತು ನಾರಾಯಣ್ ಸುಬ್ರಮಣಿಯನ್ ಅವರು 2015ರಲ್ಲಿ ಅಲ್ಟ್ರಾವೈಲೆಟ್ ಕಂಪನಿಯನ್ನು ಆರಂಭಿಸಿದ್ದಾರೆ. ದೇಶದ ಪ್ರಸಿದ್ಧ ದ್ವಿಚಕ್ರ ವಾಹನ ಕಂಪನಿ ಟಿವಿಎಸ್ 11 ಕೋಟಿ ರೂ. ಹೂಡಿಕೆ ಮಾಡಿ ಕಂಪನಿಯಲ್ಲಿ ಶೇ.25.76 ಪಾಲನ್ನು ಪಡೆದುಕೊಂಡಿದ್ದಾರೆ.