ಐಷಾರಾಮಿ ಮರ್ಸಿಡಿಸ್ ಮೇಬ್ಯಾಕ್ ಕಾರ್ ಖರೀದಿಸಿದ ಬೆಂಗ್ಳೂರಿನ ಕ್ಷೌರಿಕ!

Public TV
3 Min Read
ramesh maybach

– ಬೆಂಗ್ಳೂರಲ್ಲಿ ಇಬ್ಬರ ಬಳಿ ಬಿಟ್ರೆ ಈ ಕಾರ್ ಇರೋದು ರಮೇಶ್ ಬಳಿ ಮಾತ್ರ

ಬೆಂಗಳೂರು: 2011ರಲ್ಲಿ ರಾಲ್ಸ್ ರಾಯ್ಸ್ ಕಾರು ಕೊಳ್ಳುವುದರ ಮೂಲಕ ಸಖತ್ ಫೇಮಸ್ ಆಗಿದ್ದ ಕ್ಷೌರಿಕ ರಮೇಶ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

ಕಳೆದ ತಿಂಗಳು ರಮೇಶ್ 3.2 ಕೋಟಿ ರೂ. ಮೌಲ್ಯದ ದುಬಾರಿ ಮರ್ಸಿಡಿಸ್ ಮೇಬ್ಯಾಕ್ ಎಸ್600 ಕಾರನ್ನ ಕೊಂಡುಕೊಂಡಿದ್ದಾರೆ. ಜರ್ಮನಿಯಿಂದ ಆಮದು ಮಾಡಿಕೊಂಡಿರೋ ಈ ಕಾರ್ ಬೆಂಗಳೂರಿನಲ್ಲಿ ವಿಜಯ್ ಮಲ್ಯ ಹಾಗೂ ಮತ್ತೊಬ್ಬ ಉದ್ಯಮಿ ಬಳಿ ಬಿಟ್ಟರೆ ಈಗ ರಮೇಶ್ ಅವರ ಬಳಿ ಮಾತ್ರ ಇರೋದು. ರಮೇಶ್ ಅವರ ಬಳಿ ಈಗಾಗಲೇ ರೋಲ್ಸ್ ರಾಯ್ಸ್ ಕಾರು, 11 ಮರ್ಸಿಡಿಸ್, 10 ಬಿಎಂಡಬ್ಲ್ಯೂ, 3 ಆಡಿ ಹಾಗೂ 2 ಜಾಗ್ವಾರ್ ಕಾರುಗಳಿವೆ.

ರಮೇಶ್ ಅವರು ತಮ್ಮ ಹೇರ್ ಸಲೂನ್‍ನಲ್ಲಿ 75 ರೂ.ಗೆ ಹೇರ್ ಕಟ್ ಮಾಡುವುದರ ಜೊತೆಗೆ ಐಷಾರಾಮಿ ಕಾರುಗಳನ್ನ ಬಾಡಿಗೆಗೆ ಕೊಡ್ತಾರೆ. ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕರಾದ ಇವರು ಬೌರಿಂಗ್ ಇನ್ಸ್ ಟಿಟ್ಯೂಟ್‍ನ ತಮ್ಮ ಸಲೂನ್‍ನಲ್ಲಿ ಪ್ರತಿದಿನ ಕನಿಷ್ಠ 5 ಗಂಟೆಗಳ ಕಾಲ ಗ್ರಾಹಕರಿಗೆ ಹೇರ್‍ಕಟ್ ಮಾಡ್ತಾರೆ. ತನ್ನ ಕಸುಬನ್ನು ಬಿಡಬಾರದು ಎಂಬ ಕಾರಣಕ್ಕೆ ಕ್ಷೌರಿಕ ವೃತ್ತಿಯನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ತಮ್ಮ ಬಿಳಿ ಬಣ್ಣದ ರಾಲ್ಸ್ ರಾಯ್ಸ್ ಕಾರಿನಲ್ಲೇ ಕೆಲಸಕ್ಕೆ ರಮೇಶ್ ಹೋಗುವುದು ವಿಶೇಷ.

Ramesh Babu 0 0

45 ವರ್ಷದ ರಮೇಶ್ ಕಳೆದ ತಿಂಗಳು ಬ್ಯಾಂಕ್ ಲೋನ್ ಜೊತೆಗೆ ತಮ್ಮ ಸ್ವಂತ ಹಣದಲ್ಲಿ ಮರ್ಸಿಡಿಸ್ ಮೇಬ್ಯಾಕ್ ಕಾರನ್ನು ಕೊಂಡುಕೊಂಡಿದ್ದಾರೆ. ಸಲೂನ್‍ನಿಂದ ಇವರಿಗೆ ಬರುವ ಆದಾಯ ಸಾಧಾರಣವಾಗಿದ್ರೂ ಲಾಭದಾಯಕವಾದ ಕಾರ್ ಬಾಡಿಗೆಗೆ ಕೊಡುವ ಬಿಸಿನೆಸ್ ನಡೆಸಿಕೊಂಡು ಬರ್ತಿದ್ದಾರೆ.

ಮಲ್ಯಾ ಬಳಿ ಇತ್ತು ಇಂತಹದ್ದೇ ಕಾರ್: ವಿಜಯ್ ಮಲ್ಯಾ ಬಳಿ ಕೂಡ ಚಿನ್ನದ ಬಣ್ಣದ ಮೇಬ್ಯಾಕ್ ಕಾರ್ ಇತ್ತು. ಆದ್ರೆ ಮಲ್ಯಾ ಲಂಡನ್‍ಗೆ ಹೋದ ನಂತರ ಈ ಕಾರ್ ಬೆಂಗಳೂರಿನಲ್ಲಿ ಕಾಣಿಸಿಕೊಂಡಿಲ್ಲ. ಕೆಲವರು ಮಲ್ಯಾ ಈ ಕಾರನ್ನು ಮಾರಿದ್ದಾರೆ ಅಂತ ಹೇಳಿದ್ರೆ ಇನ್ನೂ ಕೆಲವರು ಈ ಕಾರನ್ನ ಯುಬಿ ಸಿಟಿಯಲ್ಲಿ ಪಾರ್ಕ್ ಮಾಡಲಾಗಿದೆ ಅಂತಾರೆ.

ramesh babu

ಮಲ್ಯಾ ಹಾಗೂ ಮತ್ತೊಬ್ಬ ಉದ್ಯಮಿಯನ್ನು ಬಿಟ್ಟರೆ ಬೆಂಗಳೂರಿನಲ್ಲಿ ಈ ಕಾರ್ ಹೊಂದಿರೋ ಏಕೈಕ ವ್ಯಕ್ತಿ ನಾನು ಎಂದು ತಿಳಿದು ತುಂಬಾ ಹೆಮ್ಮೆಯಾಗುತ್ತದೆ. ಈ ಮಟ್ಟಕ್ಕೆ ಬರಲು ನಾನು ತುಂಬಾ ಕಷ್ಟಪಟ್ಟು ಕಲಸ ಮಾಡಿದ್ದೀನಿ. ಜಗತ್ತಿನಲ್ಲಿರೋ ಎಲ್ಲಾ ಐಷಾರಾಮಿ ಕಾರ್‍ಗಳನ್ನು ಕೊಳ್ಳಬೇಕೆಂಬುದು ನನ್ನ ಕನಸು. ರಾಲ್ಸ್ ರಾಯ್ಸ್ ನಂತರ ಈಗ ಮರ್ಸಿಡಿಸ್ ಮೇಬ್ಯಾಕ್. ಇದನ್ನು ಓಡಿಸೋದೇ ಒಂದು ಥ್ರಿಲ್ ಅಂತ ರಮೇಶ್ ಹೇಳ್ತಾರೆ.

ನಾನು ಯಾವ ಮಟ್ಟದಿಂದ ಇಲ್ಲಿಯತನಕ ಬಂದೆ ಅನ್ನೋದನ್ನ ಮರೆಯಲು ಇಷ್ಟವಿಲ್ಲ. ನಾನು ಅನುಭವಿಸಿದ ಕಷ್ಟ, ತಂದೆ ತೀರಿಕೊಂಡ ಬಳಿಕ ನನ್ನ ತಾಯಿ ಬಡತನದಲ್ಲೂ ನನ್ನನ್ನು ಕಷ್ಟಪಟ್ಟು ಸಾಕಿದ್ದನ್ನು ಮರೆಯೋಕಾಗಲ್ಲ. ಈ ಕೆಲಸದಿಂದಲೇ ನಾನಿಂದು ಶ್ರೀಮಂತನಾಗಿದ್ದೀನಿ. ಆದ್ದರಿಂದ ಈ ಕೆಲಸವನ್ನು ಮುಂದುವರೆಸುತ್ತೇನೆ. ಈ ರೀತಿಯ ಇನ್ನೂ ಅನೇಕ ಕಾರ್‍ಗಳನ್ನು ಹೊಂದಬೇಕು ಎಂಬುದು ನನ್ನ ಆಸೆ ಅಂತಾರೆ ರಮೇಶ್.

ramesh babu2

1979ರಲ್ಲಿ ಅವರ ತಂದೆ ತೀರಿಕೊಂಡಾದ ರಮೇಶ್‍ಗೆ 9 ವರ್ಷ. ಎಸ್‍ಎಸ್‍ಎಲ್‍ಸಿ ಮುಗಿದ ಬಳಿಕ ವಿದ್ಯಾಭ್ಯಾಸ ನಿಲ್ಲಿಸಿ ತಂದೆಯಂತೆಯೇ ಕ್ಷೌರಿಕ ವೃತ್ತಿಯನ್ನ ಮುಂದುವರೆಸಿದ್ರು. 1994ರಲ್ಲಿ ಮಾರುತಿ ಓಮ್ನಿ ಕಾರನ್ನು ಕೊಂಡು ಬಾಡಿಗೆಗೆ ಬಿಟ್ಟ ನಂತರ ರಮೇಶ್ ಅವರ ಅದೃಷ್ಟವೇ ಬದಲಾಯಿತು. ಅಲ್ಲಿಂದ ರಮೇಶ್ ಅವರಿಗೆ ಕಾರ್‍ಗಳ ಮೇಲಿನ ಪ್ರೀತಿ ಶುರುವಾಯ್ತು.

ಪ್ರಸ್ತುತ ರಮೇಶ್ ಅವರ ಬಳಿ 150 ಐಷಾರಾಮಿ ಕಾರುಗಳಿವೆ. ಇವುಗಳಲ್ಲಿ ಕೆಲವನ್ನ ರಮೇಶ್ ಕೆಲಸಕ್ಕೆ ಹೋಗುವಾಗ ತೆಗೆದುಕೊಂಡು ಹೋಗ್ತಾರೆ ಅಥವಾ ಒಳ್ಳೇ ಗ್ರಾಹಕರು ಸಿಕ್ಕರೆ ಬಾಡಿಗೆಗೆ ಕೊಡ್ತಾರೆ.

Share This Article
Leave a Comment

Leave a Reply

Your email address will not be published. Required fields are marked *