ಬೆಂಗಳೂರು: ಜನವರಿ 31 ಹಾಗೂ ಫೆಬ್ರವರಿ 1 ರಾಷ್ಟ್ರಾದ್ಯಂತ ಬ್ಯಾಂಕ್‍ಗಳ ಮುಷ್ಕರ ಇರಲಿದೆ. ಫೆ.2 ಭಾನುವಾರ ಆದ್ದರಿಂದ ಒಟ್ಟು ಮೂರು ದಿನ ಸತತವಾಗಿ ಬ್ಯಾಂಕ್ ಬಂದ್ ಆಗಲಿದೆ. ಒಟ್ಟು ಮೂರು ದಿನ ಬ್ಯಾಂಕ್ ಬಂದ್ ಇರುವುದರಿಂದ ಸಾರ್ವಜನಿಕರಿಗೆ ಬ್ಯಾಂಕಿಂಗ್ ವಿಚಾರದಲ್ಲಿ ವ್ಯತ್ಯಯ ಆಗಲಿದೆ.
ಸರ್ಕಾರ ಮತ್ತು ಬ್ಯಾಂಕ್‍ಗಳ ನಡುವೆ ವೇತನ ಒಪ್ಪಂದ ಮತ್ತು ವಿವಿಧ ಬೇಡಿಕೆಗಳಿಗೆ ಸಂಬಂಧಪಟ್ಟಂತೆ ಸತತ ಎರಡು ವರ್ಷಗಳಿಂದ ಮಾತುಕತೆ, ಚರ್ಚೆಗಳು ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವೇತನ ಹೆಚ್ಚಳ ಮಾತುಕತೆ ವಿಫಲವಾಗಿರೋ ಕಾರಣ ಬ್ಯಾಂಕ್ ನೌಕರರು ಬಂದ್ ನಡೆಸುತ್ತಿದ್ದಾರೆ. ಆದ್ದರಿಂದ ಬ್ಯಾಂಕ್ ನೌಕರರು ಈಗ ಬ್ಯಾಂಕ್ ಬಂದ್ ಮಾಡಲು ಮುಂದಾಗಿದ್ದಾರೆ. 12.30% ವೇತನ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಆದರೆ ಬ್ಯಾಂಕ್ ನೌಕರರು 2017ರಲ್ಲಿ 15% ಇತ್ತು. ಈಗ ಅದಕ್ಕೂ ಕಡಿಮೆ ಅಂದರೆ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದ ಕಾರಣ ಸತತ ಎರಡು ವರ್ಷಗಳ ಚರ್ಚೆಯಾಗುತ್ತಿತ್ತು.
Advertisement
Advertisement
2017ಕ್ಕೆ ಹಳೆ ವೇತನ ಒಪ್ಪಂದ ಮುಗಿದಿದೆ. ನಂತರ ಸತತ ಎರಡು ವರ್ಷಗಳಿಂದ ವೇತನ ಒಪ್ಪಂದದ ಮಾತುಕತೆ ಫಲ ಕೊಡದ ಹಿನ್ನೆಲೆ ಬಂದ್‍ಗೆ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಕರೆ ನೀಡಲಾಗಿದೆ. ಜನವರಿ 31 ಹಾಗೂ ಫೆಬ್ರವರಿ 1 ಒಟ್ಟು ಎರಡು ದಿನ ಬಂದ್ ಮಾಡಿ. ನಂತರ ಮಾರ್ಚ್ 11, 12, 13 ಒಟ್ಟು ಮೂರು ದಿನ ಬಂದ್ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಈ ಎರಡೂ ಬಂದ್ ನಂತರವೂ ಸರ್ಕಾರ ವೇತನ ಒಪ್ಪಂದ ಸರಿ ಮಾಡದೇ ಇದ್ದರೆ ಏಪ್ರಿಲ್ 1 ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ.