ಬೆಂಗಳೂರು ಬಂದ್‌: ಬಿಎಂಟಿಸಿ ಸಂಚಾರ ಇರುತ್ತಾ? ಇಲ್ವೋ? – ಗೊಂದಲದಲ್ಲಿ ಚಾಲಕರು

Public TV
1 Min Read
BMTC

ಬೆಂಗಳೂರು: ಮಂಗಳವಾರದ ಬೆಂಗಳೂರು ಬಂದ್‌ಗೆ (Bengaluru Bandh) ಬಿಎಂಟಿಸಿ ಬಸ್‌ ಸಂಚಾರ ಇರುತ್ತಾ? ಇಲ್ವೋ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟವಾದ ನಿರ್ಧಾರ ಪ್ರಕಟವಾಗಿಲ್ಲ.

ಮಂಗಳವಾರ ಬಿಎಂಟಿಸಿ ಬಸ್ಸುಗಳನ್ನು (BMTC Bus) ರಸ್ತೆಗೆ ಇಳಿಸಬೇಕಾ? ಬೇಡವೇ ಎಂಬ ಗೊಂದಲದಲ್ಲಿ ಚಾಲಕರಿದ್ದಾರೆ. ಈಗಾಗಲೇ ಬಿಎಂಟಿಸಿ‌ ನೌಕರರ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ.

 

ಕೆಲ ಸಂಘಟನೆಗಳಲ್ಲಿ ಬೆಂಬಲ ನೀಡಬೇಕೇ? ಬೇಡವೇ ಎಂಬುದರ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ಬೆಂಬಲ ನೀಡಿದ ಕೆಲ ಸಂಘಟನೆಗಳ ಪ್ರಕಾರ ಮಂಗಳವಾರ ಬಸ್ಸುಗಳು ಡಿಪೋದಿಂದ ಹೊರ ಬರುವುದು ಅನುಮಾನ. ಆದರೆ ಇಲ್ಲಿಯವರೆಗೂ ಸಂಪೂರ್ಣವಾಗಿ ನೌಕರರಲ್ಲಿ ಯಾವುದೇ ಒಮ್ಮತ ಮೂಡಿಲ್ಲ. ಇದನ್ನೂ ಓದಿ: ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಈದ್ ಮಿಲಾದ್‍ಗೆ ಕಡ್ಡಾಯ ರಜೆ ಬ್ಯಾನರ್: ವ್ಯಾಪಕ ಆಕ್ರೋಶ

ಇಂದು ಸಂಜೆ ಈ ಬಗ್ಗೆ ಸಂಘಟನೆಗಳ ನಾಯಕರ ಜೊತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸಭೆ ನಡೆಸಲಿದ್ದಾರೆ. ಇತ್ತ ಕೆಲ ಸಂಘಟನೆಗಳಿಂದಲೂ ಪ್ರತ್ಯೇಕ ಸಭೆ ನಡೆಯಲಿದೆ. ಸಂಜೆಯ ಸಭೆಯ ಬಳಿಕವಷ್ಟೇ ಬಿಎಂಟಿಸಿ ಸಂಚಾರದ ಬಗ್ಗೆ ಸ್ಪಷ್ಟವಾದ ನಿರ್ಧಾರ ಸಿಗಲಿದೆ.

Web Stories

Share This Article