– ಸೆ.29ರ ಬಂದ್‌ಗೆ ಬೆಂಬಲ
ಬೆಂಗಳೂರು: ಕಾವೇರಿ (Cauvery) ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಮಂಗಳವಾರ ನಡೆಯಲಿರುವ ಬಂದ್‌ಗೆ (Bengaluru Bandh) ನಮ್ಮ ಬೆಂಬಲ ಇಲ್ಲ. ನಾಳೆ ನಮ್ಮ ಸೇವೆಗಳು ಯಥಾಸ್ಥಿತಿಯಲ್ಲಿ ಇರಲಿವೆ ಎಂದು ಓಲಾ, ಊಬರ್ ಅಸೋಸಿಯೇಷನ್ (Ola, Uber Association) ಮಾಹಿತಿ ನೀಡಿದೆ.
ಸೋಮವಾರ ಕನ್ನಡಪರ ಹಾಗೂ ಅನೇಕ ವಿವಿಧ ಸಂಘಟನೆಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಓಲಾ, ಊಬರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್, ನಾಳಿನ ಬಂದ್‌ಗೆ ನಮ್ಮ ಬೆಂಬಲ ಇಲ್ಲ. ಆದರೆ ಸೆಪ್ಟೆಂಬರ್ 29ರಂದು ನಡೆಯಲಿರುವ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಲೆಕ್ಕಿಸದೆ ಕಾವೇರಿಗಾಗಿ ಮಂಡ್ಯಕ್ಕೆ ಹೊರಟ ನಟಿ ಲೀಲಾವತಿ
Advertisement
Advertisement
ಬೆಂಗಳೂರಿನಲ್ಲಿ 1 ಲಕ್ಷಕ್ಕೂ ಅಧಿಕ ಓಲಾ, ಊಬರ್ ಆಟೋಗಳು ನಿತ್ಯ ಸಂಚಾರ ನಡೆಸುತ್ತವೆ. 48 ಸಾವಿರ ಟ್ಯಾಕ್ಸಿಗಳು ಓಡಾಡುತ್ತವೆ. 3 ಸಾವಿರ ಕ್ಯೂಟ್ ವಾಹನಗಳು (ಸಣ್ಣ ಪ್ರಮಾಣದ ವಾಹನಗಳು) ಕೂಡ ಎಂದಿನಂತೆ ಓಡಾಟ ನಡೆಸಲಿವೆ. ಆದರೆ ಸೆಪ್ಟೆಂಬರ್ 29ಕ್ಕೆ ನಡೆಯಲಿರುವ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಓಲಾ ಊಬರ್ ಅಸೋಸಿಯೇಷನ್ ತಿಳಿಸಿದೆ. ಇದನ್ನೂ ಓದಿ: ಶಾಂತಿಯುತ ಬಂದ್‌ಗೆ ಸರ್ಕಾರ ಅಡಚಣೆ ಮಾಡಲ್ಲ: ಡಿಕೆಶಿ
Advertisement
Web Stories