ಬೆಂಗಳೂರು: ಕಾವೇರಿ (Cauvery Water Disputes) ಉಳಿವಿಗಾಗಿ ಬೆಂಗಳೂರು ಗ್ರಾಮಾಂತರ-ಬೆಂಗಳೂರು ಬಂದ್‍ನ ಪರಿಣಾಮ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KempeGowda International Airport) ಮೇಲೆ ಪರಿಣಾಮ ಬೀರಿದೆ.
ಬೆಂಗಳೂರು ಬಂದ್ (Bengaluru Bandh) ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಪ್ರಯಾಣಿಕರು ಬೆಂಗಳೂರು ಪ್ರಯಾಣ ರದ್ದು ಮಾಡಿರುವ ಹಿನ್ನೆಲೆಯಲ್ಲಿ 13 ದೇಶೀಯ ವಿಮಾನಗಳ ಆಗಮನ ಕೊನೆ ಕ್ಷಣದಲ್ಲಿ ರದ್ದಾಗಿದೆ. ದೆಹಲಿ, ಕೊಚ್ಚಿ, ಮಂಗಳೂರು, ಮುಂಬೈ ಸೇರಿದಂತೆ ಇತರೆ 13 ವಿಮಾನಗಳ ಹಾರಾಟವನ್ನ ಏರ್ ಲೈನ್ಸ್ ನವರು ಕೊನೆ ಕ್ಷಣದಲ್ಲಿ ರದ್ದು ಮಾಡಿದ್ದಾರೆ.
Advertisement
Advertisement
ಹೀಗಾಗಿ ಸಹಜವಾಗಿ ಏರ್‌ಪೋರ್ಟ್ ನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು, ಪರೋಕ್ಷವಾಗಿ ಇದು ಕ್ಯಾಬ್ ಚಾಲಕರ ಮೇಲೂ ಪರಿಣಾಮ ಬೀರಿದೆ. ಪ್ರಯಾಣಿಕರಿಗಾಗಿ ಕ್ಯಾಬ್ ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನೂ ಓದಿ: ಕರ್ನಾಟಕ, ತಮಿಳುನಾಡು ನಡುವೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಬ್ರೇಕ್
Advertisement
Advertisement
ಇತ್ತ ಏರ್‌ಪೋರ್ಟ್‌ಗೆ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಕಡಿಮೆಯಾಗಿದೆ. ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಬೆಂಗಳೂರಿಗೆ ಬರುವವರ ಸಂಖ್ಯೆಯಲ್ಲಿ ಕಡಿತಗೊಂಡಿದೆ. ಏರ್‌ಪೋರ್ಟ್ ನಿಂದ ಬೇರೆ ಕಡೆಗೆ ತೆರಳುವವರ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದ್ದು, ಕ್ಯಾಬ್ ಚಾಲಕರ ಮೇಲೆ ಪರಿಣಾಮ ಬೀರಿದೆ.
ಸಹಜವಾಗಿ ಏರ್‌ಪೋರ್ಟ್ ನ ಟರ್ಮಿನಲ್ 1 ರಲ್ಲಿ ದೇಶದ ಇತರೆ ಭಾಗಗಳಿಂದ ಬರುವ ಪ್ರಯಾಣಿಕರ ಸಂಖ್ಯೆ ಸರಾಸರಿ 27-24 ಸಾವಿರ ಇದ್ದು ಆದ್ರೆ ಇಂದು 25000 ಕ್ಕೆ ಇಳಿದಿದೆ. ಹೀಗಾಗಿ ಸಹಜವಾಗಿ ಕ್ಯಾಬ್ ಚಾಲಕರಿಗೆ ಇದು ಹಿನ್ನೆಡೆಯಾಗಿದ್ದು ಪ್ರಯಾಣಿಕರು ಬಾರದೆ ಪ್ರಯಾಣಿಕರಿಗಾಗಿ ಕ್ಯಾಬ್ ಚಾಲಕರು ಕಾಯುವಂತಾಗಿದೆ.
Web Stories